alex Certify
ಕನ್ನಡ ದುನಿಯಾ       Mobile App
       

Kannada Duniya

ದಂಗಾಗುವಂತಿದೆ ಬುಲೆಟ್ ಟ್ರೈನ್ ಹಿಂದಿನ ಅಸಲಿ ಕತೆ

ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾದ ಅಹಮದಾಬಾದ್ –ಮುಂಬೈ ನಡುವಿನ ಬುಲೆಟ್ ಟ್ರೈನ್ ಯೋಜನೆ ಬಿಳಿಯಾನೆಯಾಗಲಿದೆಯಾ ಎಂಬ ಪ್ರಶ್ನೆ ಮೂಡಿದೆ.

1 ಲಕ್ಷ ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಯೋಜನೆ ಲಾಭದಾಯಕವಲ್ಲ ಎಂಬ ಮಾತುಗಳು ಕೇಳಿಬಂದಿವೆ. ದೇಶದ ಸಾರಿಗೆ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಯೋಜನೆ ಎನ್ನಲಾಗಿದ್ದ ಇದರ ಅಸಲಿ ವಿಷಯ ದಂಗಾಗುವಂತಿದೆ.

ಪಶ್ಚಿಮ ರೈಲ್ವೇ ವಲಯದ ಅಹಮದಾಬಾದ್ –ಮುಂಬೈ ಮಾರ್ಗ ನಷ್ಟದಲ್ಲಿ ನಡೆಯುತ್ತಿದೆ. ಈ ಮಾರ್ಗದ ಶೇ. 40 ರಷ್ಟು ಸೀಟ್ ಗಳು ಖಾಲಿ ಉಳಿಯುತ್ತಿವೆ. ಕಳೆದ ತ್ರೈಮಾಸಿಕದ ಅವಧಿಯಲ್ಲಿ ಪಶ್ಚಿಮ ರೈಲ್ವೇಯ ಈ ಮಾರ್ಗ ಸುಮಾರು 10 ಕೋಟಿ ರೂ. ನಷ್ಟ ಅನುಭವಿಸಿದೆ ಎಂಬ ಮಾಹಿತಿಯನ್ನು ಮುಂಬೈ ಆರ್.ಟಿ.ಐ. ಕಾರ್ಯಕರ್ತ ಅನಿಲ್ ಗಾಲ್ಲಾಲಿ ಅವರಿಗೆ ನೀಡಲಾಗಿದೆ.

ಪ್ರಸ್ತುತ ಈ ಮಾರ್ಗದಲ್ಲಿ ಸಾಮಾನ್ಯ, ಶತಾಭ್ಧಿ, ರಾಜಧಾನಿ ಎಕ್ಸ್ ಪ್ರೆಸ್ ಟ್ರೈನ್ ಗಳು ಸಂಚರಿಸುತ್ತವೆ. ಪ್ರಯಾಣಿಕರಿಲ್ಲದೇ ಖಾಲಿ ಹೊಡೆಯುತ್ತಿರುವ ಈ ಮಾರ್ಗದಲ್ಲಿ ಬುಲೆಟ್ ರೈಲ್ ಬಂದಲ್ಲಿ ಟಿಕೆಟ್ ದರ ಪ್ರಯಾಣಿಕರಿಗೆ ಹೊರೆಯಾಗಲಿದೆ. ದುಬಾರಿ ಬೆಲೆ ಕೊಟ್ಟು ಈ ಮಾರ್ಗದಲ್ಲಿ ಓಡಾಡುವ ವರ್ಗವಾದರೂ ಯಾವುದು ಎಂಬ ಪ್ರಶ್ನೆ ಎದುರಾಗಿದೆ.

ಜುಲೈ 1 ರಿಂದ ಸೆಪ್ಟಂಬರ್ 30 ರ ನಡುವೆ 32 ರೈಲ್ ಗಳಲ್ಲಿ 7,35,630 ಸೀಟ್ ಗಳಿದ್ದು, ಅವುಗಳಲ್ಲಿ 4,41,795 ಸೀಟ್ ಖಾಲಿ ಉಳಿದಿವೆ. 44,29,08,220 ರೂ. ಆದಾಯ ನಿರೀಕ್ಷಿಸಲಾಗಿತ್ತು. ಆದರೆ, 30,16,24,623 ರೂ. ಆದಾಯ ಬಂದಿದೆ.

ಅಹಮದಾಬಾದ್ –ಮುಂಬೈ ಮಾರ್ಗದಲ್ಲಿ 31 ಮೇಲ್/ ಎಕ್ಸ್ ಪ್ರೆಸ್ ರೈಲ್ ಗಳು 7,06446 ಆಸನ ಸಾಮರ್ಥ್ಯದೊಂದಿಗೆ ಸೇವೆ ಸಲ್ಲಿಸುತ್ತವೆ. ಇದರಲ್ಲಿ 3,98,002 ಸೀಟ್ ಗಳನ್ನು ಮಾತ್ರ ಬುಕ್ ಮಾಡಲಾಗಿದೆ. ನಿರೀಕ್ಷಿತ ಆದಾಯಕ್ಕಿಂತ ಭಾರೀ ನಷ್ಟವಾಗಿದೆ ಎಂದು ಪಶ್ಚಿಮ ರೈಲ್ವೇ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಕಾರಣಗಳಿಂದ ಬುಲೆಟ್ ಟ್ರೈನ್ ಬಿಳಿಯಾನೆಯಾಗಲಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...