alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜ್ಯ ಸರ್ಕಾರಿ ನೌಕರರಿಗೆ ಬಜೆಟ್ ನಲ್ಲಿ ಸಿಗಲಿದೆ ಸಿಹಿ ಸುದ್ದಿ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಬಜೆಟ್ ನಲ್ಲಿ ಹಬ್ಬದೂಟ ಸಿಗುವ ಸಾಧ್ಯತೆ ಇದೆ. ಫೆಬ್ರವರಿ 16 ರಂದು ಸಿ.ಎಂ. ಸಿದ್ಧರಾಮಯ್ಯ ಬಜೆಟ್ ಮಂಡಿಸಲಿದ್ದು, ರಾಜ್ಯ ಸರ್ಕಾರಿ ನೌಕರರ ವೇತನ ಹೆಚ್ಚಳದ ಬಗ್ಗೆ ಘೋಷಣೆ ಮಾಡಲಿದ್ದಾರೆ.

6 ನೇ ವೇತನ ಆಯೋಗ ನೀಡಿರುವ ವರದಿಯಲ್ಲಿ ವೇತನ ಪರಿಷ್ಕರಣೆಯಲ್ಲಿ ಶೇ. 30 ರಷ್ಟು ಫಿಟ್ ಮೆಂಟ್ ನೀಡಲು ಶಿಫಾರಸು ಮಾಡಿದ್ದು, ಇದಕ್ಕೆ ಶೇ. 5 ರಷ್ಟು ಹೆಚ್ಚುವರಿ ಫಿಟ್ ಮೆಂಟ್ ಸೇರಿಸಿ ಶೇ. 35 ರಷ್ಟು ಫಿಟ್ ಮೆಂಟ್ ಕೊಡಲು ಸಿ.ಎಂ. ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

5.23 ಲಕ್ಷ ಸರ್ಕಾರಿ ನೌಕರರು, 5.73 ಲಕ್ಷ ಪಿಂಚಣಿದಾರರು, 73,000 ಅನುದಾನಿತ ಶಿಕ್ಷಣ ಸಂಸ್ಥೆ ಮತ್ತು ಸ್ಥಳೀಯ ಸಂಸ್ಥೆಗಳ ನೌಕರರ ವೇತನ ಪರಿಷ್ಕರಣೆ ಬಜೆಟ್ ನಲ್ಲಿ ಘೋಷಣೆಯಾಗಲಿದೆ. ಮನೆ ಬಾಡಿಗೆ ಭತ್ಯೆ, ವೇತನ ಬಡ್ತಿ ಮೊತ್ತ, ನಗರ ಪರಿಹಾರ ಭತ್ಯೆ ಮೊದಲಾದವುಗಳ ಬಗ್ಗೆ ನೌಕರರಿಗೆ ಸಿಹಿ ಸುದ್ದಿ ಸಿಗುವ ನಿರೀಕ್ಷೆ ಇದೆ.

ಸರ್ಕಾರಿ ನೌಕರರ ವೇತನ ಪರಿಷ್ಕರಣೆಗಾಗಿ ಹೆಚ್ಚುವರಿಯಾಗಿ ಸುಮಾರು 10,508 ಕೋಟಿ ರೂ. ಅಗತ್ಯವಿದೆ. ಚುನಾವಣೆ ಸಮೀಪದಲ್ಲಿರುವುದರಿಂದ ಸಿ.ಎಂ. ಜನಪ್ರಿಯ ಘೋಷಣೆಗಳನ್ನು ಮಾಡಲಿದ್ದಾರೆ. ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಬಿ.ಪಿ.ಎಲ್. ಕುಟುಂಬಗಳಿಗೆ ಬಟ್ಟೆ -ಕಂಬಳಿ ವಿತರಣೆ ಬಗ್ಗೆ ಬಜೆಟ್ ನಲ್ಲಿ ಘೋಷಣೆ ಮಾಡುವ ನಿರೀಕ್ಷೆ ಇದೆ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...