alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್ ಸುದ್ದಿ! ದುಬಾರಿಯಾಗಲಿದೆ ಮದ್ಯ, ಫೋನ್, ಕಾರು

ನವದೆಹಲಿ: ಏಪ್ರಿಲ್ 1 ರಿಂದ ಹಣಕಾಸು ವರ್ಷ ಪ್ರಾರಂಭವಾಗಲಿದ್ದು, 2018 -19 ನೇ ಸಾಲಿನಲ್ಲಿ ಕೇಂದ್ರ ಬಜೆಟ್ ನಲ್ಲಿ ಪ್ರಸ್ತಾಪಿಸಿರುವಂತೆ ಹಲವು ವಸ್ತುಗಳ ಬೆಲೆ ಏರಿಕೆಯಾಗಲಿದೆ.

ಹೊಸ ತೆರಿಗೆ, ಲೆಕ್ಕಾಚಾರದಲ್ಲಿ ಬದಲಾವಣೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಬಜೆಟ್ ನಲ್ಲಿ ಘೋಷಿಸಲಾದ ಪ್ರಸ್ತಾವನೆಗಳು ಜಾರಿಗೆ ಬರಲಿವೆ. ಅದರಂತೆ ದುಬಾರಿಯಾಗಲಿರುವ ವಸ್ತುಗಳ ಕುರಿತ ವಿವರ ಇಲ್ಲಿದೆ.

ರಾಜ್ಯದಲ್ಲಿ ಮದ್ಯದ ದರ ದುಬಾರಿಯಾಗಲಿದೆ. ಶೇ. 8 ರಷ್ಟು ಸುಂಕ ಹೆಚ್ಚಳವಾಗಿರುವ ಕಾರಣ, ಮದ್ಯದ ಬೆಲೆ ನಾಳೆಯಿಂದ ಏರಿಕೆಯಾಗಲಿದೆ. ಇದರೊಂದಿಗೆ ಸ್ಮಾರ್ಟ್ ಫೋನ್, ಸೌಂದರ್ಯ ವರ್ಧಕ, ಬೆಳ್ಳಿ, ಕೃತಕ ಆಭರಣ, ವಜ್ರ, ಖಾದ್ಯ ತೈಲ, ರೇಡಿಯಲ್ ಟೈಯರ್ ಬೆಲೆ ಏರಿಕೆಯಾಗಲಿದೆ.

ಎಲ್.ಇ.ಡಿ., ಎಲ್.ಸಿ.ಡಿ., ಟಿ.ವಿ. ಹಾಗೂ ಕಂಪ್ಯೂಟರ್ ದರದಲ್ಲಿ ಏರಿಕೆಯಾಗಲಿದೆ. ಪರ್ಫ್ಯೂಮ್, ಸಂಸ್ಕರಿತ ಆಹಾರ, ಚಪ್ಪಲಿ, ತಂಪು ಕನ್ನಡಕ, ಮಕ್ಕಳ ಆಟಿಕೆ, ಸಿಗರೇಟ್, ಪಾನ್ ಮಸಾಲ ಮೊದಲಾದವುಗಳ ದರ ದುಬಾರಿಯಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...