alex Certify
ಕನ್ನಡ ದುನಿಯಾ       Mobile App
       

Kannada Duniya

2020 ರ ವೇಳೆಗೆ 5 ಜಿ ಸೇವೆ ನೀಡಲಿದೆ ಬಿ ಎಸ್ ಎನ್ ಎಲ್

ಸದ್ಯ ಟೆಲಿಕಾಂ ಕ್ಷೇತ್ರದಲ್ಲಿ ಡೇಟಾ ಯುದ್ಧ ನಡೆಯುತ್ತಿದೆ. ಗ್ರಾಹಕರನ್ನು ಆಕರ್ಷಿಸಲು ಎಲ್ಲ ಕಂಪನಿಗಳು ಅಗ್ಗದ ಪ್ಲಾನ್ ಗಳನ್ನು ಜಾರಿಗೆ ತರ್ತಿವೆ. ಇದ್ರಲ್ಲಿ ಸರ್ಕಾರಿ ಕಂಪನಿ ಬಿ ಎಸ್ ಎನ್ ಎಲ್ ಹೊರತಾಗಿಲ್ಲ. ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ಅಗ್ಗದ ಪ್ಲಾನ್ ಶುರು ಮಾಡ್ತಿರುವ ಬಿ ಎಸ್ ಎನ್ ಎಲ್ 2020 ರ ವೇಳೆಗೆ 5 ಜಿ ಸೇವೆಯನ್ನು ಶುರು ಮಾಡಲಿದೆಯಂತೆ.

ಜಿ ಚಾನೆಲ್ ಜೊತೆ ಮಾತನಾಡಿದ ಬಿ ಎಸ್ ಎನ್ ಎಲ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಅನುಪಮ್ ಶ್ರೀವಾಸ್ತವ್ ಈ ಸಂಗತಿ ತಿಳಿಸಿದ್ದಾರೆ. ಭಾರತದಲ್ಲಿ ಮೊಟ್ಟ ಮೊದಲ ಬಾರಿ 3 ಜಿ ಸೇವೆ ನೀಡಿದ್ದು ಬಿ ಎಸ್ ಎನ್ ಎಲ್. ಈಗ ಜಗತ್ತು 5 ಜಿ ಹಿಂದೆ ಓಡ್ತಿದೆ. ಹಾಗಾಗಿ ಬಿ ಎಸ್ ಎನ್ ಎಲ್ 2020 ರ ವೇಳೆಗೆ ಭಾರತದ ಗ್ರಾಹಕರಿಗೆ 5 ಜಿ ಸೇವೆ ನೀಡಲಿದೆ ಎಂದಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಡಿಜಿಟಲ್ ಇಂಡಿಯಾ ಬಗ್ಗೆ ಮಾತನಾಡಿದ ಶ್ರೀವಾಸ್ತವ್, ನಾವೀಗ ಬ್ರಾಡ್ಬ್ಯಾಂಡ್ ಫಾರ್ ಆಲ್ ಬಗ್ಗೆ ಚಿಂತನೆ ಮಾಡಬೇಕು. ದೇಶದಲ್ಲಿ 5 ಜಿ ಸೇವೆ ಶುರುವಾದ್ರೆ ಡಿಜಿಟಲ್ ಇಂಡಿಯಾಕ್ಕೆ ಬೆಂಬಲ, ವೇಗ ಸಿಗಲಿದೆ ಎಂದಿದ್ದಾರೆ. ಬಿ ಎಸ್ ಎನ್ ಎಲ್ ಇದಕ್ಕಾಗಿ ನೋಕಿಯಾ, ZTE ಮತ್ತು ಕೊರಿಯಾಂಟ್ ಜೊತೆ ಒಪ್ಪಂದ ಮಾಡಿಕೊಂಡಿದೆ ಎಂದು ಶ್ರೀವಾಸ್ತವ್ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...