alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಮ್ ಇಲ್ಲದೆ ಕರೆ ಮಾಡುವ ಆಫರ್ ನೀಡ್ತಿದೆ ಬಿ ಎಸ್ ಎನ್ ಎಲ್

ಸಾರ್ವಜನಿಕ ವಲಯದ ಟೆಲಿಕಾಂ ಕಂಪನಿ ಬಿ ಎಸ್ಎನ್ಎಲ್ ದೇಶದ ಮೊದಲ ಅಂತರ್ಜಾಲ ಟೆಲಿಫೋನ್ ಸೇವೆಯನ್ನು ಪ್ರಾರಂಭಿಸಿದೆ. ಈ ಸೇವೆ ಶುರುವಾದ ಮೇಲೆ ಬಿ ಎಸ್ ಎನ್ ಎಲ್ ಗ್ರಾಹಕರು ಕಂಪನಿಯ ವಿಂಗ್ ಮೊಬೈಲ್ ಆ್ಯಪ್ ಮೂಲಕ ದೇಶದಾದ್ಯಂತ ಯಾವುದೇ ನಂಬರ್ ಗೆ ಕರೆ ಮಾಡಬಹುದು.

ಈ ಹಿಂದೆ ಮೊಬೈಲ್ ಅಪ್ಲಿಕೇಷನ್ ಮೂಲಕ ಕರೆ ಮಾಡುವ ಸೌಲಭ್ಯ ಕೆಲ ಆ್ಯಪ್ ಗಳಿಗೆ ಮಾತ್ರ ಲಭ್ಯವಿತ್ತು. ಈಗ ಆ್ಯಪ್ ಮೂಲಕ ಯಾವುದೇ ಟೆಲಿಕಾಂ ಕಂಪನಿ ನಂಬರ್ ಗೆ ಬೇಕಾದ್ರೂ ಕರೆ ಮಾಡಬಹುದಾಗಿದೆ. ಸ್ಪರ್ಧಾತ್ಮಕ ಪರಿಸರದಲ್ಲಿ ಬಿ ಎಸ್ ಎನ್ ಎಲ್ ಪಾಲನ್ನು ಹೆಚ್ಚಿಸಲು ಇದು ಒಳ್ಳೆ ಕೆಲಸವೆಂದು ಟೆಲಿಕಾಂ ಸಚಿವ ಮನೋಜ್ ಸಿನ್ಹಾ ಹೇಳಿದ್ದಾರೆ. ಇಂಟರ್ನೆಟ್ ಟೆಲಿಫೋನ್ ಸೇವೆ ಶುರು ಮಾಡಿರುವ ಬಿ ಎಸ್ ಎನ್ ಎಲ್ ಗೆ ಮನೋಜ್ ಸಿನ್ಹಾ ಅಭಿನಂದನೆ ಸಲ್ಲಿಸಿದ್ದಾರೆ.

ಗ್ರಾಹಕರಿಗೆ ಸಿಮ್ ಬಳಸದೆ ಕರೆ ಮಾಡುವ ಸೌಲಭ್ಯವನ್ನು ಈ ಸೇವೆ ನೀಡ್ತಿದೆ. ಈ ಸೇವೆ ಲಾಭ ಪಡೆದು ಗ್ರಾಹಕರು ದೇಶದ ಯಾವುದೇ ಮೂಲೆಗೆ ಕರೆ ಮಾಡಬಹುದು. ಈ ಸೇವೆಗೆ ಈ ವಾರದಲ್ಲಿಯೇ ನೋಂದಣಿ ಕಾರ್ಯ ಶುರುವಾಗಿದೆ. ಜುಲೈ 25 ರಿಂದ ಸೇವೆ ಆರಂಭವಾಗಲಿದೆ. ಈ ಸೇವೆ ಪಡೆಯಲು 1099 ರೂಪಾಯಿ ಖರ್ಚು ಮಾಡಬೇಕೆಂದು ಮಾಧ್ಯಮಗಳು ಹೇಳ್ತಿವೆ. 1099 ರೂಪಾಯಿ ಖರ್ಚು ಮಾಡಿದ್ರೆ ಒಂದು ವರ್ಷ ಉಚಿತ ಧ್ವನಿ ಹಾಗೂ ವಿಡಿಯೋ ಕರೆಗಳನ್ನು ನೀವು ಮಾಡಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...