alex Certify
ಕನ್ನಡ ದುನಿಯಾ       Mobile App
       

Kannada Duniya

ಕೇವಲ 1 ರೂ.ಗೆ ಸಿಗಲಿದೆ ಅನಿಯಮಿತ ಡೇಟಾ

ಮೊಬೈಲ್ ಡೇಟಾ ವಿಚಾರಕ್ಕೆ ಸಂಬಂಧಿಸಿದಂತೆ ಕಂಪನಿಗಳ ಮಧ್ಯೆ ಪೈಪೋಟಿ ಶುರುವಾಗಿದೆ. ಮಾರುಕಟ್ಟೆಗೆ ಅಗ್ಗದ ಯೋಜನೆಗಳು ಬರ್ತಿವೆ. ಈ ಯುದ್ಧದಲ್ಲಿ ಹಿಂದೆ ಬೀಳದ ಬಿ ಎಸ್ ಎನ್ ಎಲ್ ಕೂಡ ಅತಿ ಕಡಿಮೆ ಬೆಲೆಯ ಯೋಜನೆ ತರ್ತಿದೆ.

ಉಳಿದ ಕಂಪನಿಗಳ ಜೊತೆ ಪೈಪೋಟಿ ನಡೆಸುವ ಜೊತೆಗೆ ಗ್ರಾಹಕರಿಗೆ ಅತಿ ಕಡಿಮೆ ಬೆಲೆಗೆ ಡೇಟಾ ನೀಡಲು ಬಿ ಎಸ್ ಎನ್ ಎಲ್ ಮುಂದಾಗಿದೆ. ಇದೇ ಕಾರಣಕ್ಕೆ ಕೇವಲ 1 ರೂಪಾಯಿಗೆ ಡೇಟಾ ನೀಡುವ ಯೋಜನೆ ರೂಪಿಸಿದೆ. ಇದಕ್ಕಾಗಿ ಕೆನಡಾದ ಮೊಬೈಲ್ ಹಾಗೂ ಟ್ಯಾಬ್ಲೆಟ್ ತಯಾರಿಕಾ ಕಂಪನಿ ಡೇಟಾವಿಂಡ್ ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಫೆಬ್ರವರಿ ಮೂರನೇ ವಾರದ ನಂತ್ರ ಬಿ ಎಸ್ ಎನ್ ಎಲ್ ಒಂದು ರೂಪಾಯಿಗೆ ಗ್ರಾಹಕರಿಗೆ ಅನಿಯಮಿತ ಡೇಟಾ ನೀಡಲಿದೆ.  ಫೆಬ್ರವರಿಯಲ್ಲಿ ಕೆನಡಾ ಪ್ರಧಾನಿ ಭಾರತಕ್ಕೆ ಬರ್ತಿದ್ದಾರೆ. ಈ ಸಂದರ್ಭದಲ್ಲಿ ಬಿ ಎಸ್ ಎನ್ ಎಲ್ ಡೇಟಾವಿಂಡ್ ಜೊತೆ ಸೇರಿ ಸೇವೆ ಶುರುಮಾಡಲಿದೆ. ಈ ಒಂದು ರೂಪಾಯಿ ಲಾಭವನ್ನು  ಡೇಟಾವಿಂಡ್ ಫೋನ್ ಹಾಗೂ ಟ್ಯಾಬ್ ಬಳಕೆದಾರರು ಮಾತ್ರ ಪಡೆಯಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...