alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕಂಪನಿ ಗ್ರಾಹಕರಿಗೆ 1 ತಿಂಗಳಿಗೆ ಸಿಗಲಿದೆ 1500 ಜಿಬಿ ಡೇಟಾ

ಜಿಯೋ ಗೀಗಾ ಫೈಬರ್ ಬ್ರಾಡ್ ಬ್ಯಾಂಡ್ ಸೇವೆ ಘೋಷಣೆ ಮಾಡಿದೆ. ಇದಕ್ಕೆ ಟಕ್ಕರ್ ನೀಡಲು ಭಾರತೀಯ ದೂರ ಸಂಚಾರ ನಿಗಮ ಬಿಎಸ್ಎನ್ಎಲ್ ತನ್ನ ಪ್ಲಾನ್ ನಲ್ಲಿ ಬದಲಾವಣೆ ಮಾಡಿದೆ. ಕಂಪನಿ ತನ್ನ FTTH ಪ್ಲಾನ್ ನ ಎಫ್ಯುಪಿ ಮಿತಿಯನ್ನು ಹೆಚ್ಚಿಸಿದೆ. ಆದ್ರೆ ಇದು ಚೆನ್ನೈ ಗ್ರಾಹಕರಿಗೆ ಮಾತ್ರ ಲಭ್ಯವಾಗಲಿದೆ.

ಚೆನ್ನೈ ಗ್ರಾಹಕರಿಗೆ ಇನ್ಮುಂದೆ ಬಿಎಸ್ಎನ್ಎಲ್ 5000 ರೂಪಾಯಿಗೆ 1500 ಜಿಬಿ ಡೇಟಾ ನೀಡಲಿದೆ. ಇದಕ್ಕಿಂತ ಮೊದಲು 1000 ಜಿಬಿ ಡೇಟಾ ನೀಡಲಾಗ್ತಾಯಿತ್ತು.

FTTH ULD 4999 ರೂಪಾಯಿ ಪ್ಲಾನ್ ಖರೀದಿ ಮಾಡಿದ ಗ್ರಾಹಕರಿಗೆ 100 ಎಂಬಿಪಿಎಸ್ ವೇಗದಲ್ಲಿ 1500 ಜಿಬಿ ಡೇಟಾ ಸಿಗಲಿದೆ. ಮಿತಿ ಮುಗಿದ ನಂತ್ರ ಬಳಕೆದಾರರಿಗೆ 2 ಎಂಬಿಪಿಎಸ್ ವೇಗದಲ್ಲಿ ಇಂಟರ್ನೆಟ್ ಸೌಲಭ್ಯ ಸಿಗಲಿದೆ. ಉಚಿತ ವಾಯ್ಸ್ ಕಾಲ್ ಸೇವೆಯನ್ನು ಬಿಎಸ್ಎನ್ಎಲ್ ನೀಡ್ತಿದೆ.

ULD 999 ರೂಪಾಯಿ ಪ್ಲಾನ್ ನಲ್ಲಿ ಗ್ರಾಹಕರಿಗೆ 250 ಜಿಬಿ ಡೇಟಾ ಸಿಗಲಿದೆ. 1299 ರೂಪಾಯಿ ಪ್ಲಾನ್ ಕೂಡ ಶುರು ಮಾಡಿದೆ. ಇದ್ರಲ್ಲಿ 550 ಜಿಬಿ ಡೇಟಾ ಸಿಗಲಿದೆ. 2999 ರೂಪಾಯಿ ಪ್ಲಾನ್ ನಲ್ಲಿ 900 ಜಿಬಿ ಡೇಟಾ ಲಭ್ಯವಾಗಲಿದೆ. ಬಿಎಸ್ಎನ್ಎಲ್ 1045, 1395 ಮತ್ತು 1895 ರೂಪಾಯಿ ಪ್ಲಾನ್ ನಲ್ಲಿಯೂ ಬದಲಾವಣೆ ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...