alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಎಸ್ಎನ್ಎಲ್ ಬ್ರಾಡ್ ಬ್ಯಾಂಡ್ ಪ್ಲಾನ್ ನಲ್ಲಿ ಸಿಗಲಿದೆ 1.1 ಟಿಬಿ ಡೇಟಾ

ಸರ್ಕಾರಿ ಟೆಲಿಕಾಂ ಕಂಪನಿ ಬಿಎಸ್ಎನ್ಎಲ್ ಸದ್ಯ ಚಾಲ್ತಿಯಲ್ಲಿರುವ ತನ್ನ ನಾಲ್ಕು ಬ್ರಾಡ್ ಬ್ಯಾಂಡ್ ಯೋಜನೆಯಲ್ಲಿ ಬದಲಾವಣೆ ಮಾಡಿದೆ. ಕಂಪನಿ ಯೋಜನೆಯ ಡೌನ್ಲೋಡ್ ವೇಗ ಹಾಗೂ ಡೇಟಾವನ್ನು ಹೆಚ್ಚಳ ಮಾಡಿದೆ. ಜಿಯೋ ಗಿಗಾ ಫೈಬರ್ ಗೆ ಟಕ್ಕರ್ ನೀಡಲು ಬಿಎಸ್ಎನ್ಎಲ್ ಪ್ಲಾನ್ ಗಳಲ್ಲಿ ಬದಲಾವಣೆ ಮಾಡಿದೆ.

ಬಿಎಸ್ಎನ್ಎಲ್ ಇತ್ತೀಚೆಗಷ್ಟೇ 699 ರೂ. ಪ್ಲಾನ್ ನಲ್ಲಿ ಬದಲಾವಣೆ ಮಾಡಿತ್ತು. ಈಗ ಎಲ್ಲ ನಾಲ್ಕು ಯೋಜನೆಗಳಲ್ಲಿ ಬದಲಾವಣೆ ಮಾಡಿದೆ. ಎಫ್.ಯು.ಪಿ. ಯನ್ನು 1.1 ಟಿಬಿಯವರೆಗೆ ಏರಿಸುವ ನಿರ್ಧಾರಕ್ಕೆ ಬಂದಿದೆ. ಈ ಪ್ಲಾನ್ ವೇಗವನ್ನೂ ಹೆಚ್ಚಳ ಮಾಡಲಾಗಿದೆ.

ಬಿಎಸ್ಎನ್ಎಲ್ 875 ರೂಪಾಯಿ ಪ್ಲಾನ್, 1025 ರೂಪಾಯಿ ಪ್ಲಾನ್, 1091 ರೂಪಾಯಿ ಪ್ಲಾನ್ ಹಾಗೂ 1,199 ರೂಪಾಯಿ ಪ್ಲಾನ್ ನಲ್ಲಿ ಬದಲಾವಣೆ ಮಾಡಿದೆ. ಕಂಪನಿ ಸದ್ಯ ಚೆನ್ನೈ ಸರ್ಕಲ್ ನಲ್ಲಿ ಮಾತ್ರ ಬದಲಾವಣೆ ಮಾಡಿದೆ. ಶೀಘ್ರವೇ ಭಾರತದಾದ್ಯಂತ ಈ ಬದಲಾವಣೆ ಜಾರಿಗೆ ಬರುವ ಸಾಧ್ಯತೆಯಿದೆ.

ಕಂಪನಿ 875 ರೂಪಾಯಿ ಪ್ಲಾನ್ ನಲ್ಲಿ ಇನ್ಮುಂದೆ 10 ಎಂಬಿಪಿಎಸ್ ಬದಲು 20 ಎಂಬಿಪಿಎಸ್ ವೇಗ ನೀಡಲಿದೆ. ಒಂದು ತಿಂಗಳವರೆಗೆ ಗ್ರಾಹಕರಿಗೆ 800 ಜಿಬಿ ಡೇಟಾ ಸಿಗಲಿದೆ. 1199 ರೂಪಾಯಿ ಪ್ಲಾನ್ ನಲ್ಲಿ 20 ಎಂಬಿಪಿಎಸ್ ವೇಗ ಸಿಗಲಿದೆ. 1100 ಜಿಬಿ ಡೇಟಾ ಸಿಗಲಿದೆ. 1025 ರೂಪಾಯಿ ಹಾಗೂ 1099 ರೂಪಾಯಿ ಪ್ಲಾನ್ ನಲ್ಲೂ 20 ಎಂಬಿಪಿಎಸ್ ವೇಗ ಸಿಗಲಿದೆ. 900 ಹಾಗೂ 1000 ಜಿಬಿ ಡೇಟಾ ಸಿಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...