alex Certify
ಕನ್ನಡ ದುನಿಯಾ       Mobile App
       

Kannada Duniya

ಬಿ.ಎಸ್.ಎನ್.ಎಲ್. ನಿಂದ ಭರ್ಜರಿ ಆಫರ್

BSNL_LOGO-telecom-india

ಬೆಂಗಳೂರು: ಖಾಸಗಿಯವರ ಪೈಪೋಟಿ ನಡುವೆಯೂ ಗ್ರಾಹಕರನ್ನು ಸೆಳೆಯುತ್ತಿರುವ ಬಿ.ಎಸ್.ಎನ್.ಎಲ್., ಈಗಾಗಲೇ ಹಲವು ಕೊಡುಗೆಗಳನ್ನು ಗ್ರಾಹಕರಿಗೆ ನೀಡಿದೆ. ಇದೀಗ ಮತ್ತೊಂದು ಕೊಡುಗೆ ನೀಡಲು ಮುಂದಾಗಿದೆ.

ಲ್ಯಾಂಡ್ ಲೈನ್ ಗ್ರಾಹಕರಿಗೆ ಕೇವಲ 49 ರೂಪಾಯಿಯ ಮಾಸಿಕ ಶುಲ್ಕದ ಹೊಸ ಯೋಜನೆ ನೀಡಲಿದೆ. ಸ್ಥಿರ ದೂರವಾಣಿ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಹೊಸ ಯೋಜನೆ ಪ್ರಕಟಿಸಲಾಗಿದೆ. 6 ತಿಂಗಳ ಕಾಲ ಮಾಸಿಕ 49 ರೂಪಾಯಿ ಪಾವತಿಸಬೇಕಿದೆ. ನಂತರ ಸಾಮಾನ್ಯ ದರ ಅನ್ವಯಿಸಲಿದೆ. ಈಗಾಗಲೇ ಬಿ.ಎಸ್.ಎನ್.ಎಲ್.ನಿಂದ ರಾತ್ರಿ ಮತ್ತು ಪ್ರತಿ ಭಾನುವಾರ ಉಚಿತ ಕರೆಗಳನ್ನು ನೀಡಲಾಗುತ್ತಿದ್ದು, ಅದು ಗ್ರಾಹಕರನ್ನು ಸೆಳೆದಿದೆ ಎಂದು ಹೇಳಲಾಗಿದೆ.

ಬಿ.ಎಸ್.ಎನ್.ಎಲ್. ಕರ್ನಾಟಕ ವೃತ್ತದ ಸಿ.ಜಿ.ಎಂ. ನಾಗರಾಜ್ ಅವರು ಈ ಕುರಿತು ಮಾಹಿತಿ ನೀಡಿದ್ದು, ನಗರ ಹಾಗೂ ಗ್ರಾಮಾಂತರ ಪ್ರದೇಶದ ಗ್ರಾಹಕರಿಗೆ 49 ರೂ. ದರ ಅನ್ವಯವಾಗಲಿದೆ. ವಿದ್ಯಾರ್ಥಿಗಳಿಗಾಗಿ ಪಿ.ವಿ. 118 ಪ್ಲಾನ್, ಫ್ರೀಡಂ ಪಿ.ವಿ. 77 ಪ್ಲಾನ್ ಮತ್ತು ಅಪೂರ್ವ ಪಿ.ವಿ. 87 ಪ್ಲಾನ್ ಪರಿಚಯಿಸಲಾಗಿದೆ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...