alex Certify
ಕನ್ನಡ ದುನಿಯಾ       Mobile App
       

Kannada Duniya

499 ರೂ.ಗೆ ಈ ಕಂಪನಿ ನೀಡ್ತಿದೆ 45 ಜಿಬಿ ಡೇಟಾ,ಅನಿಯಮಿತ ಕರೆ

ಭಾರತ ಸಂಚಾರ ನಿಗಮ ನಿಯಮಿತ ಬಿ ಎಸ್ ಎನ್ ಎಲ್ ಪೋಸ್ಟ್ ಪೇಯ್ಡ್ ಗ್ರಾಹಕರಿಗೆ 499 ರೂಪಾಯಿ ಯೋಜನೆ ಶುರು ಮಾಡಿದೆ. ಈ ಪ್ಲಾನ್ ನಲ್ಲಿ ಕಂಪನಿ ಗ್ರಾಹಕರಿಗೆ 1 ತಿಂಗಳವರೆಗೆ 45 ಜಿಬಿ 3 ಜಿ ಡೇಟಾ ನೀಡ್ತಿದೆ. ಇದ್ರ ಜೊತೆಗೆ ಕಂಪನಿ 100 ಎಸ್ ಎಂ ಎಸ್ ಉಚಿತವಾಗಿ ನೀಡ್ತಿದೆ.

ವರದಿ ಪ್ರಕಾರ, ಅನಿಯಮಿತ ಕರೆ ಹಾಗೂ ಉಚಿತ ಎಸ್ ಎಂ ಎಸ್ ಸೌಲಭ್ಯದ ಜೊತೆ ಈ ಪ್ಲಾನ್ ಬಿಡುಗಡೆ ಮಾಡಲಾಗಿದೆಯಂತೆ. ವೇಗ ಮುಗಿದ ಮೇಲೆ 40kbps ವೇಗದಲ್ಲಿ ಡೇಟಾ ಗ್ರಾಹಕರಿಗೆ ಸಿಗಲಿದೆ. ರಿಲಾಯನ್ಸ್ ಜಿಯೋ 509 ಪ್ಲಾನ್ ಗೆ ಟಕ್ಕರ್ ನೀಡಲು ಬಿಎಸ್ ಎನ್ ಎಲ್ ಈ ಯೋಜನೆ ಶುರು ಮಾಡಿದೆ.

ಬಿಎಸ್ಎನ್ ಎಲ್ ಇತ್ತೀಚಿಗಷ್ಟೇ ದೀರ್ಘಾವದಿ ಪ್ಲಾನ್ ಶುರು ಮಾಡಿದೆ. 1,999 ರೂಪಾಯಿ ಪ್ಲಾನ್ ನಲ್ಲಿ ಗ್ರಾಹಕರಿಗೆ 365 ದಿನಗಳವರೆಗೆ 2 ಜಿಬಿ 3 ಜಿ ಡೇಟಾ ಸಿಗಲಿದೆ. ಅನಿಯಮಿತ ಧ್ವನಿ ಕರೆ ಜೊತೆ 100 ಎಸ್ ಎಂ ಎಸ್ ಸಿಗಲಿದೆ. ಈ ಪ್ಲಾನ್ ನಲ್ಲಿ ಗ್ರಾಹಕರು ತಿಂಗಳಿಗೆ 167 ರೂಪಾಯಿ ಖರ್ಚು ಮಾಡಿದಂತಾಗುತ್ತದೆ. ಆದ್ರೆ ಈ ಪ್ಲಾನ್ ಚೆನ್ನೈ ಹಾಗೂ ತಮಿಳುನಾಡು ಗ್ರಾಹಕರಿಗೆ ಮಾತ್ರ ಲಭ್ಯವಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...