alex Certify
ಕನ್ನಡ ದುನಿಯಾ       Mobile App
       

Kannada Duniya

999 ರೂ.ಗೆ ಈ ಕಂಪನಿ ನೀಡ್ತಿದೆ ವರ್ಷ ಪೂರ್ತಿ ಡೇಟಾ, ಉಚಿತ ಕರೆ

ಬಿಎಸ್ಎನ್ಎಲ್ ಗ್ರಾಹಕರಿಗೆ ದೊಡ್ಡ ಉಡುಗೊರೆ ನೀಡಿದೆ. ಕಂಪನಿ ತನ್ನ ಗ್ರಾಹಕರಿಗೆ 999 ರೂಪಾಯಿಯಲ್ಲಿ ಒಂದು ವರ್ಷಗಳ ಕಾಲ ಪ್ರತಿದಿನ 1ಜಿಬಿ ಡೇಟಾ ನೀಡಲಿದೆ. ಇದ್ರ ಜೊತೆಗೆ 6 ತಿಂಗಳವರೆಗೆ ಅನಿಯಮಿತ ಕರೆ ಹಾಗೂ ಪ್ರತಿದಿನ 100 ಎಸ್ಎಂಎಸ್ ಗ್ರಾಹಕರಿಗೆ ಸಿಗಲಿದೆ.

ರಿಚಾರ್ಜ್ ಮಾಡಿದ 181 ದಿನಗಳ ನಂತ್ರ ಕರೆ ಹಾಗೂ ಎಸ್ಎಂಎಸ್ ಗೆ ಚಾರ್ಜ್ ಆಗಲಿದೆ. ಆದ್ರೆ ಒಂದು ವರ್ಷದವರೆಗೂ ಪ್ರತಿದಿನ 1ಜಿಬಿ ಡೇಟಾ ಸಿಗಲಿದೆ. ಕೆಲ ದಿನಗಳ ಹಿಂದಷ್ಟೆ ಪ್ರಿಪೇಡ್ ಗ್ರಾಹಕರಿಗಾಗಿ ಕೂಲ್ ಪ್ಲಾನ್ ಶುರುಮಾಡಿದೆ. ಏರ್ಟೆಲ್, ವೋಡಾಫೋನ್, ಐಡಿಯಾದಲ್ಲಿ ಪ್ರತಿದಿನ ಸೀಮಿತ ಡೇಟಾ ಸಿಗಲಿದೆ. ಆದ್ರೆ ಬಿಎಸ್ಎನ್ಎಲ್ ಕೂಲ್ ಪ್ಲಾನ್ ನಲ್ಲಿ ಅನಿಯಮಿತ ಡೇಟಾವನ್ನು ಗ್ರಾಹಕರಿಗೆ ನೀಡ್ತಿದೆ. ರೋಮಿಂಗ್ ನಲ್ಲಿ ಕೂಡ ಅನಿಯಮಿತ ಕರೆ ಸೌಲಭ್ಯ ನೀಡಲಾಗ್ತಿದೆ. ಇದ್ರ ಬೆಲೆ 1099 ರೂಪಾಯಿಯಾಗಿದೆ.

ಬಿಎಸ್ಎನ್ಎಲ್ ಎಲ್ಲ ಪ್ಲಾನ್ ನಲ್ಲೂ 3 ಜಿ ಡೇಟಾ ಸೌಲಭ್ಯ ನೀಡ್ತಿದೆ. ಉಳಿದ ಕಂಪನಿಗಳಿಗೆ ಬಿಎಸ್ಎನ್ಎಲ್ ಪೈಪೋಟಿ ನೀಡ್ತಿದೆ. 186, 187, 349, 429, 485 ಮತ್ತು 666 ಪ್ಲಾನ್ ನಲ್ಲಿಯೂ ಬಿಎಸ್ಎನ್ಎಲ್ ಕೆಲವೊಂದು ಬದಲಾವಣೆ ಮಾಡಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...