alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಎಸ್ಎನ್ಎಲ್ ಈ ಪ್ಲಾನ್ ನಲ್ಲಿ ಸಿಗಲಿದೆ 4 ಜಿಬಿ ಡೇಟಾ

ಟೆಲಿಕಾಂ ಕ್ಷೇತ್ರದಲ್ಲಿ ಡೇಟಾ ಯುದ್ಧ ಮುಂದುವರೆದಿದೆ. ರಿಲಾಯನ್ಸ್ ಜಿಯೋ ಹಾಗೂ ಏರ್ಟೆಲ್ ನಂತ್ರ ಸರ್ಕಾರಿ ಕಂಪನಿ ಬಿಎಸ್ಎನ್ಎಲ್ 149 ರೂಪಾಯಿ ಪ್ಲಾನ್ ನಲ್ಲಿ ಗ್ರಾಹಕರಿಗೆ ಬಂಪರ್ ಆಫರ್ ನೀಡ್ತಿದೆ. ಫಿಫಾ ವಿಶ್ವಕಪ್ ವೀಕ್ಷಿಸುವ ಪ್ರೇಕ್ಷಕರಿಗಾಗಿ ಬಿಎಸ್ಎನ್ಎಲ್ ಈ ಆಫರ್ ಶುರು ಮಾಡಿದೆ.

ಫಿಫಾ ವಿಶ್ವಕಪ್ ಸ್ಪೆಷಲ್ ಡೇಟಾ ಎಸ್ಟಿವಿ 149 ಆಫರ್ ಬಿಟ್ಟಿದೆ. ರಿಲಾಯನ್ಸ್ ಜಿಯೋ ತನ್ನೆಲ್ಲ ಗ್ರಾಹಕರಿಗೆ 1.5 ಜಿಬಿ ಹೆಚ್ಚುವರಿ ಡೇಟಾ ನೀಡುವ ಘೋಷಣೆ ಮಾಡಿದ ಬೆನ್ನಲ್ಲೆ ಬಿಎಸ್ಎನ್ಎಲ್ ಈ ಆಫರ್ ಬಿಡುಗಡೆ ಮಾಡಿದೆ. ಫಿಫಾ ವರ್ಲ್ಡ್ ಕಪ್ ಸ್ಪೆಷಲ್ ಡೇಟಾ 149 ಪ್ಲಾನ್ ನಲ್ಲಿ ಬಿಎಸ್ಎನ್ಎಲ್ ಆಕರ್ಷಕ ಕೊಡುಗೆ ನೀಡಿದೆ.

ಗ್ರಾಹಕರಿಗೆ ಕಂಪನಿ 4 ಜಿಬಿ ಡೇಟಾ ನೀಡ್ತಿದೆ. ಜೂನ್ 14 ರಿಂದಲೇ ಆಫರ್ ಶುರುವಾಗಿದೆ. ಗ್ರಾಹಕರು ಜುಲೈ 15 ರವರೆಗೆ ಇದ್ರ ಲಾಭ ಪಡೆಯಲಿದ್ದಾರೆ. ದೆಹಲಿ, ಮುಂಬೈ ಬಿಎಸ್ಎನ್ಎಲ್ ಗ್ರಾಹಕರನ್ನು ಹೊರತುಪಡಿಸಿ ಮತ್ತೆಲ್ಲ ಗ್ರಾಹಕರಿಗೆ ಈ ಸೌಲಭ್ಯ ಸಿಗಲಿದೆ. ಬಿಎಸ್ಎನ್ಎಲ್ 149 ಪ್ಲಾನ್ ನಲ್ಲಿ ವಾಯ್ಸ್ ಹಾಗೂ ಎಸ್ಎಂಎಸ್ ಉಚಿತವಾಗಿ ನೀಡ್ತಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...