alex Certify
ಕನ್ನಡ ದುನಿಯಾ       Mobile App
       

Kannada Duniya

ಕೇವಲ 99 ರೂ.ಗೆ ಬಿಎಸ್ಎನ್ಎಲ್ ನೀಡ್ತಿದೆ ಇದನ್ನೆಲ್ಲ

ರಿಲಾಯನ್ಸ್ ಜಿಯೋಗೆ ಟಕ್ಕರ್ ನೀಡಲು ಮುಂದಾಗಿರುವ ಬಿಎಸ್ಎನ್ಎಲ್ ಮುಂದಾಗಿದೆ. ಬಿಎಸ್ಎನ್ಎಲ್ 4 ಅಗ್ಗದ ಬ್ರಾಡ್ಬ್ಯಾಂಡ್ ಯೋಜನೆಯನ್ನು ಶುರು ಮಾಡಿದೆ. ಕಂಪನಿಯ ಈ ಎಲ್ಲ ಯೋಜನೆಯಲ್ಲಿ ಗ್ರಾಹಕರಿಗೆ 20 ಎಂಬಿಪಿಎಸ್ ವೇಗದ ಇಂಟರ್ನೆಟ್ ಸಿಗಲಿದೆ.

ಬಿಎಸ್ಎನ್ಎಲ್ ಹೊಸ ಪ್ಲಾನ್ 99 ರೂಪಾಯಿಯಿಂದ 399 ರೂಪಾಯಿಯವರೆಗಿದೆ. ಇದ್ರಲ್ಲಿ ಪ್ರತಿ ತಿಂಗಳು 45 ಜಿಬಿಯಿಂದ ಹಿಡಿದು 600 ಜಿಬಿಯವರೆಗೆ ಡೇಟಾ ಸಿಗಲಿದೆ.ಅತಿ ಕಡಿಮೆ ವೆಚ್ಚದ 99 ರೂಪಾಯಿ ಪ್ಲಾನ್ ನಲ್ಲಿ ಪ್ರತಿ ದಿನ 1.5 ಜಿಬಿ ಡೇಟಾ ಜೊತೆ ಅನಿಯಮಿತ ಕರೆ ಸೌಲಭ್ಯ ಸಿಗಲಿದೆ.

ಜಿಯೋ ಫೈಬರ್ ಬ್ರಾಡ್ಬ್ಯಾಂಡ್ ಶುರು ಮಾಡಲಿದೆ ಎಂಬ ಸುದ್ದಿಯಿದೆ. ಇದ್ರ ವೇಗ 100 ಎಂಪಿಬಿಎಸ್ ಇರಲಿದೆ. ಸಾವಿರ ರೂಪಾಯಿಗೂ ಕಡಿಮೆ ಬೆಲೆಯಲ್ಲಿ ಜಿಯೋ ಫೈಬರ್ ಬ್ರಾಡ್ಬ್ಯಾಂಡ್ ನಲ್ಲಿ ಟಿವಿ, ಅನಿಯಮಿತ ಕರೆ ಸೌಲಭ್ಯ ನೀಡಲಿದೆ ಎನ್ನಲಾಗ್ತಿದೆ.

ಇದಕ್ಕೆ ಟಕ್ಕರ್ ನೀಡಲು ಬಿಎಸ್ಎನ್ಎಲ್ ನಾಲ್ಕು ಹೊಸ ಪ್ಲಾನ್ ಶುರು ಮಾಡಿದೆ. 99 ರೂಪಾಯಿ ಜೊತೆಗೆ 199 ರೂಪಾಯಿ ಪ್ಲಾನ್ ಕೂಡ ಬಿಎಸ್ಎನ್ಎಲ್ ಶುರು ಮಾಡಿದೆ. BSNL BBG Combo ULD 150GB ಪ್ಲಾನ್ ನಲ್ಲಿ ಗ್ರಾಹಕರಿಗೆ ಪ್ರತಿ ದಿನ 5 ಜಿಬಿ ಡೇಟಾ ಸಿಗಲಿದೆ. ಇನ್ನೊಂದು 299 ಪ್ಲಾನ್ ಆಗಿದ್ದು, ಪ್ರತಿ ದಿನ 10 ಜಿಬಿ ಡೇಟಾವನ್ನು ಬಿಎಸ್ಎನ್ಎಲ್ ನೀಡಲಿದೆ.  399 ರೂಪಾಯಿ ಪ್ಲಾನ್ ನಲ್ಲಿ ಗ್ರಾಹಕರಿಗೆ ಪ್ರತಿ ತಿಂಗಳು 600 ಜಿಬಿ ಡೇಟಾ ಸಿಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...