alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಎಸ್ಎನ್ಎಲ್ 75 ರೂ. ಪ್ಲಾನ್ ನಲ್ಲಿ ಏನುಂಟು?ಏನಿಲ್ಲ?

ಸರ್ಕಾರಿ ಟೆಲಿಕಾಂ ಕಂಪನಿ ಬಿಎಸ್ಎನ್ಎಲ್, ಖಾಸಗಿ ಕಂಪನಿಗಳಾದ ಜಿಯೋ, ಏರ್ಟೆಲ್ ಹಾಗೂ ವೊಡಾಫೋನ್ ಗೆ ಟಕ್ಕರ್ ನೀಡ್ತಿದೆ. ಬಿಎಸ್ಎನ್ಎಲ್ 100 ರೂಪಾಯಿ ಕಡಿಮೆ ಬೆಲೆಯ ಯೋಜನೆಗಳನ್ನು ಜಾರಿಗೆ ತರ್ತಿದೆ. ಈಗ 75 ರೂಪಾಯಿ ಪ್ರೀಪೇಯ್ಡ್ ಪ್ಲಾನ್ ಶುರು ಮಾಡಿದೆ.

ಈ ಹೊಸ ಪ್ಲಾನ್ ನಲ್ಲಿ ಗ್ರಾಹಕರಿಗೆ 10 ಜಿಬಿ ಡೇಟಾ ಹಾಗೂ ಅನಿಯಮಿತ ಕರೆ ಸೌಲಭ್ಯ ಸಿಗಲಿದೆ. ಇದ್ರ ಜೊತೆಗೆ 500 ಎಸ್ಎಂಎಸ್ ಸಿಗಲಿದೆ. ಈ ಪ್ಲಾನ್ 15 ದಿನಗಳ ಸಿಂಧುತ್ವ ಹೊಂದಿದ್ದು, ಗ್ರಾಹಕರು ಇದನ್ನು ಮುಂದುವರೆಸಬಹುದಾಗಿದೆ. ಗ್ರಾಹಕರಿಗೆ ಸಿಂಧುತ್ವವನ್ನು 30 ದಿನಗಳಿಂದ 60 ದಿನಗಳವರೆಗೆ ವಿಸ್ತರಿಸುವ ಅವಕಾಶವಿದೆ.

ಈ ಪ್ಲಾನ್ ನಲ್ಲಿ ಸ್ಥಳೀಯ, ಎಸ್ಟಿಡಿ ಹಾಗೂ ರೋಮಿಂಗ್ ಕರೆಗಳು ಉಚಿತವಾಗಿ ಸಿಗಲಿವೆ. ಆದ್ರೆ ಮುಂಬೈ ಹಾಗೂ ದೆಹಲಿ ಗ್ರಾಹಕರಿಗೆ ಈ ಸೌಲಭ್ಯ ಸಿಗ್ತಿಲ್ಲ. ಬೇರೆ ಊರುಗಳಲ್ಲಿರುವ ಗ್ರಾಹಕರು ಮುಂಬೈ ಅಥವಾ ದೆಹಲಿಯಲ್ಲಿರುವ ಸಂಬಂಧಿಕರಿಗೆ ಈ ಪ್ಲಾನ್ ನಲ್ಲಿ ಅನಿಯಮಿತವಾಗಿ ಕರೆ ಮಾಡಲು ಸಾಧ್ಯವಿಲ್ಲ. ಸದ್ಯ ತೆಲಂಗಾಣ ಹಾಗೂ ಆಂಧ್ರಪ್ರದೇಶ ಗ್ರಾಹಕರಿಗೆ ಈ ಪ್ಲಾನ್ ನೀಡಲಾಗ್ತಿದೆ. ಇದಕ್ಕೆ ಬಿಎಸ್ಎನ್ಎಲ್ BSNL Jeevitha Prepaid Plan ಎಂದು ಹೆಸರಿಟ್ಟಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...