alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಯೋ ಗಿಗಾ ಫೈಬರ್ ಗೆ ಟಕ್ಕರ್ ನೀಡಲು ಈ ಕಂಪನಿ ನೀಡ್ತಿದೆ ಭರ್ಜರಿ ಆಫರ್

ರಿಲಾಯನ್ಸ್ ಜಿಯೋ ಶುರುಮಾಡಿರುವ ಜಿಯೋ ಗಿಗಾ ಫೈಬರ್ ಗೆ ಉತ್ತರವಾಗಿ ಬಿ ಎಸ್ ಎನ್ ಎಲ್ ಹೊಸ ಪ್ಲಾನ್ ಶುರು ಮಾಡಿದೆ. ಹೊಸ ಯೋಜನೆ ಗ್ರಾಹಕರಿಗೆ ತುಂಬಾ ಲಾಭಕರವಾಗಲಿದೆ ಎಂದು ಕಂಪನಿ ಹೇಳ್ತಿದೆ. ಕಂಪನಿ ತನ್ನ ಅಧಿಕೃತ ವೆಬ್ಸೈಟ್ ನಲ್ಲಿ ಹೊಸ ಪ್ಲಾನ್ ಘೋಷಣೆ ಮಾಡಿದೆ.

ಬಿ ಎಸ್ ಎನ್ ಎಲ್ 491 ರೂಪಾಯಿ ಹೊಸ ಪ್ಲಾನ್ ನಲ್ಲಿ ಬಳಕೆದಾರರಿಗೆ ಪ್ರತಿ ದಿನ 20 ಎಂಬಿಪಿಎಸ್ ವೇಗದಲ್ಲಿ 20 ಜಿಬಿ ಡೇಟಾ 30 ದಿನಗಳ ಕಾಲ ಸಿಗಲಿದೆ. ಜುಲೈ 15 ರ ನಂತ್ರ ಜಿಯೋ ಗಿಗಾ ಫೈಬರ್ ಪ್ಲಾನ್ ಶುರುವಾಗಲಿದೆ. ಆದ್ರೆ ಬಿ ಎಸ್ ಎನ್ ಎಲ್ ಈಗ್ಲೇ ತನ್ನ ಯೋಜನೆ ಶುರು ಮಾಡಿದೆ. ಬಿ ಎಸ್ ಎನ್ ಎಲ್ ಮಳಿಗೆ, ಫ್ರಾಂಚೈಸಿಗಳಲ್ಲಿ 491 ರೂಪಾಯಿ ಪ್ಲಾನ್ ಸಿಗಲಿದೆ. ಬಳಕೆದಾರರಿಗೆ ಉತ್ತಮ ಗುಣಮಟ್ಟದ ಹಾಗೂ ಒಳ್ಳೆ ಸೇವೆ ನೀಡುವುದು ನಮ್ಮ ಉದ್ದೇಶವೆಂದು ಬಿ ಎಸ್ ಎನ್ ಎಲ್ ಹೇಳಿದೆ.

ಇದಲ್ಲದೆ ಬಿ ಎಸ್ ಎನ್ ಎಲ್ 777 ರೂಪಾಯಿ ಹಾಗೂ 1277 ರೂಪಾಯಿಯ ಫೈಬರ್ ಟು ದಿ ಹೋಮ್ ಪ್ಲಾನ್ ಶುರು ಮಾಡಿದೆ. 777 ರೂಪಾಯಿ ಪ್ಲಾನ್ ನಲ್ಲಿ ಗ್ರಾಹಕರಿಗೆ 50 ಎಂಬಿಪಿಎಸ್ ವೇಗದಲ್ಲಿ 500 ಜಿಬಿ ಡೇಟಾ ಸಿಗಲಿದೆ. 1277 ರೂಪಾಯಿ ಪ್ಲಾನ್ ನಲ್ಲಿ 100 ಎಂಬಿಪಿಎಸ್ ವೇಗದಲ್ಲಿ 750 ಜಿಬಿ ಡೇಟಾ ಸಿಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...