alex Certify
ಕನ್ನಡ ದುನಿಯಾ       Mobile App
       

Kannada Duniya

ವೈಷ್ಣೋ ದೇವಿ ಭಕ್ತರಿಗೆ ವೈಫೈ ಸೌಲಭ್ಯ

bsnl (1)

ವೈಷ್ಣೋ ದೇವಿ ಭಕ್ತರಿಗೆ ಖುಷಿ ಸುದ್ದಿ. ಭಾರತ್ ಸಂಚಾರ ನಿಗಮ ಲಿಮಿಟೆಡ್(ಬಿಎಸ್ಎನ್ಎಲ್) ವೈಷ್ಣೋ ದೇವಿ ಮಾರ್ಗಕ್ಕೆ ವೈಫೈ ಸೌಲಭ್ಯ ನೀಡಲು ಮುಂದಾಗಿದೆ. ಬಿಎಸ್ಎನ್ಎಲ್ ಜನರಲ್ ಮ್ಯಾನೇಜರ್ ಹೆಚ್ ಕೆ ವರ್ಮಾ ಈ ವಿಷಯವನ್ನು ತಿಳಿಸಿದ್ದಾರೆ.

ನವರಾತ್ರಿಯೊಳಗೆ ವೈಫೈ ಸೌಲಭ್ಯ ಯಾತ್ರಿಗಳಿಗೆ ಸಿಗಲಿದೆ. ಪ್ರತಿ ವರ್ಷ ವೈಷ್ಣೋ ದೇವಿ ದರ್ಶನಕ್ಕೆ ಲಕ್ಷಾಂತರ ಮಂದಿ ಬರ್ತಾರೆ. ಆದ್ರೆ ಜಮ್ಮು-ಕಾಶ್ಮೀರಕ್ಕೆ ಬರ್ತಾ ಇದ್ದಂತೆ ಸುರಕ್ಷತೆ ಹೆಸರಲ್ಲಿ ಪ್ರೀ ಪೇಡ್ ಫೋನ್ ನೆಟ್ ವರ್ಕ್ ಬಂದ್ ಆಗುತ್ತೆ. ಯಾತ್ರಿಗಳು ಸಂಬಂಧಿಕರ ಜೊತೆ ಸದಾ ಸಂಪರ್ಕದಲ್ಲಿರಲಿ ಎನ್ನುವ ಕಾರಣಕ್ಕೆ ಬಿಎಸ್ಎನ್ಎಲ್ ಯಾತ್ರಿಗಳಿಗೆ ವೈಫೈ ಸೌಲಭ್ಯ ನೀಡಲು ಮುಂದಾಗಿದೆ.

ಬಿಎಸ್ಎನ್ಎಲ್ ನಾಲ್ಕು ದಿನಗಳವರೆಗೆ ವ್ಯಾಲಿಡಿಟಿ ಇರುವ ಪ್ರೀ ಪೇಡ್ ಸಿಮ್ ನೀಡಲಿದೆ. ಈ ಯೋಜನೆಗೆ ಭಕ್ತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆಯಂತೆ. ವೈಷ್ಣೋ ದೇವಿ ದರ್ಶನ ಪಡೆದು ಬರುವವರೆಗೆ ಕುಟುಂಬಸ್ಥರ ಜೊತೆ ಸಂಪರ್ಕದಲ್ಲಿರಲು ಇದು ಒಳ್ಳೆಯದು ಎಂದಿದ್ದಾರೆ ಭಕ್ತರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...