alex Certify
ಕನ್ನಡ ದುನಿಯಾ       Mobile App
       

Kannada Duniya

ಬಿ.ಎಸ್.ಎನ್.ಎಲ್. ನೀಡಲಿದೆ ಭರ್ಜರಿ ಆಫರ್

bsn 56

ನವದೆಹಲಿ: ಮೊಬೈಲ್ ಸೇವಾ ಕ್ಷೇತ್ರದಲ್ಲಿ ಜಿಯೋ ಸಂಚಲನ ಮೂಡಿಸಿದ್ದು, ಸಹಜವಾಗಿಯೇ ಬೇರೆ ಕಂಪನಿಗಳಿಗೆ ಸವಾಲು ಎದುರಾಗಿದೆ. ಇದನ್ನು ಎದುರಿಸಲು ಕಂಪನಿಗಳು ಕೂಡ ಮುಂದಾಗಿವೆ.

ಈಗಾಗಲೇ ಸ್ಥಿರ ದೂರವಾಣಿ ಗ್ರಾಹಕರಿಗೆ ಹಲವಾರು ಕೊಡುಗೆಗಳನ್ನು ನೀಡಿರುವ ಬಿ.ಎಸ್.ಎನ್.ಎಲ್., ಜಿಯೋ ರೀತಿಯಲ್ಲೇ ಉಚಿತ ಕರೆ ದರಗಳ ಸೌಲಭ್ಯ ನೀಡುವ ಕುರಿತು ಚಿಂತಿಸಿದೆ. ಜಿಯೋ ಪ್ರವೇಶದಿಂದ ಆಗಬಹುದಾದ ಪರಿಣಾಮಗಳನ್ನು ಗಮನಿಸಿ ಬಿ.ಎಸ್.ಎನ್.ಎಲ್. ಉಚಿತ ಕರೆ ಸೌಲಭ್ಯ ನೀಡಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಅನುಪಮ್ ಶ್ರೀ ವಾಸ್ತವ್ ತಿಳಿಸಿದ್ದಾರೆ.

ಮೊಬೈಲ್ ಸೇವಾ ಮಾರುಕಟ್ಟೆಯಲ್ಲಿ ಉಳಿಯಲು ಜಿಯೋಗೆ ಪೈಪೋಟಿ ನೀಡಬೇಕು. ಜಿಯೋ ಅಗ್ಗದ ದರಗಳಿಗೆ ಅನುಗುಣವಾಗಿ ನಾವೂ ಕಡಿಮೆ ದರ ಘೋಷಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...