alex Certify
ಕನ್ನಡ ದುನಿಯಾ       Mobile App
       

Kannada Duniya

ಬಿ ಎಸ್ ಎನ್ ಎಲ್ ನೀಡ್ತಾ ಇದೆ ಭರ್ಜರಿ ಆಫರ್

bsnl_story_aaj_tak_1498903591_618x347

ಸಾರ್ವಜನಿಕ ದೂರ ಸಂಪರ್ಕ ಕಂಪನಿ ಬಿ ಎಸ್ ಎನ್ ಎಲ್ ಗ್ರಾಹಕರಿಗೆ ಖುಷಿ ಸುದ್ದಿ ನೀಡಿದೆ. ಪೋಸ್ಟ್ ಪೇಡ್ ಗ್ರಾಹಕರಿಗೆ ಜುಲೈ ಒಂದರಿಂದ ಅಂದ್ರೆ ಇಂದಿನಿಂದ 6 ಪಟ್ಟು ಜಾಸ್ತಿ ಡೇಟಾ ಸಿಗ್ತಾ ಇದೆ. ಖಾಸಗಿ ಕಂಪನಿಗಳ ಭರ್ಜರಿ ಆಫರ್ ಮಧ್ಯೆ ತನ್ನ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ಬಿ ಎಸ್ ಎನ್ ಎಲ್ ಹೊಸ ಹೊಸ ಆಫರ್ ನೀಡ್ತಾ ಇದೆ.

ಸದ್ಯದಲ್ಲಿಯೇ ಪ್ರಿಪೇಡ್ ಗ್ರಾಹಕರಿಗೂ ಹೊಸ ಯೋಜನೆ ಜಾರಿಗೆ ತರುವುದಾಗಿ ಬಿ ಎಸ್ ಎನ್ ಎಲ್ ಹೇಳಿದೆ. ಜುಲೈ ಒಂದರಿಂದ ಪೋಸ್ಟ್ ಪೇಡ್ ಗ್ರಾಹಕರಿಗೆ ಭರ್ಜರಿ ಡೇಟಾ ಸಿಗ್ತಾ ಇದೆ. ಕಂಪನಿ ಪ್ರಕಾರ ಪ್ಲಾನ್ -99 ಯೋಜನೆಯಡಿ ಗ್ರಾಹಕರಿಗೆ 250 ಎಂಬಿ ಡೇಟಾ ಸಿಗಲಿದೆ. ಇದಕ್ಕಿಂತ ಮೊದಲು ಗ್ರಾಹಕರಿಗೆ ಯಾವುದೇ ರೀತಿಯ ಡೇಟಾ ಸಿಗ್ತಾ ಇರಲಿಲ್ಲ.

ಇನ್ನೊಂದು ಪ್ಲಾನ್ 225 ನಲ್ಲಿ ಗ್ರಾಹಕರಿಗೆ 1 ಜಿಬಿ ಡೇಟಾ ಲಭ್ಯವಾಗಲಿದೆ. ಇದಕ್ಕಿಂತ ಮೊದಲು ಗ್ರಾಹಕರಿಗೆ 200 ಎಂಬಿ ಡೇಟಾ ಮಾತ್ರ ಸಿಗ್ತಾ ಇತ್ತು. ಇದ್ರ ಹಾಗೆ ಪ್ಲಾನ್ 325 ಹಾಗೂ ಪ್ಲಾನ್ 525 ಪಡೆದ ಗ್ರಾಹಕರಿಗೆ 2 ಜಿಬಿ ಹಾಗೂ 3 ಜಿಬಿ ಡೇಟಾ ಲಭ್ಯವಾಗಲಿದೆ.

ದೊಡ್ಡ ಮೊತ್ತದ ಪ್ಲಾನ್ ಬಗ್ಗೆ ಹೇಳೋದಾದ್ರೆ ಪ್ಲಾನ್ 725ನಲ್ಲಿ ಒಂದು ಜಿಬಿ ಡೇಟಾ ಬದಲು ಗ್ರಾಹಕರಿಗೆ 5ಜಿಬಿ ಡೇಟಾ ಲಭ್ಯವಾಗಲಿದೆ. 799 ಪ್ಲಾನ್ ನಲ್ಲಿ 3ಜಿಬಿ ಬದಲು 10 ಜಿಬಿ ಡೇಟಾ ಲಭ್ಯವಾಗಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...