alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಎಸ್ಎನ್ಎಲ್ ನಿಂದ ಬಿಗ್ ಆಫರ್

07_10_2016-bsnl-planಉಚಿತ ಇಂಟರ್ನೆಟ್, ಕರೆ ಸೌಲಭ್ಯವನ್ನು ಒದಗಿಸುವ ಹಿನ್ನಲೆಯಲ್ಲಿ ಎಲ್ಲ ಟೆಲಿಕಾಂ ಕಂಪನಿಗಳ ಮಧ್ಯೆ ದರ ಸಮರ ನಡೆಯುತ್ತಿದೆ. ಈಗ ಬಿಎಸ್ಎನ್ಎಲ್ ಮತ್ತೊಂದು ಹೊಸ ಆಫರ್ ಘೋಷಿಸುವ ಮೂಲಕ ಉಳಿದ ಎಲ್ಲ ಕಂಪನಿಗಳಿಗೆ ಸೆಡ್ಡು ಹೊಡೆಯಲು ಸಿದ್ಧವಾಗಿದೆ.

ಬಿಎಸ್ಎನ್ಎಲ್ ತನ್ನ ಗ್ರಾಹಕರಿಗಾಗಿ ಅನ್ ಲಿಮಿಟೆಡ್ ಇಂಟರ್ನೆಟ್ ಡೇಟಾ ಮತ್ತು ಉಚಿತ ಕರೆಯ ಸೌಲಭ್ಯವನ್ನು ನೀಡಲು ಮುಂದಾಗಿದೆ. ಈ ಆಫರ್ ಮೂಲಕ ಬಿಎಸ್ಎನ್ಎಲ್ ನ ಹಳೆಯ ಮತ್ತು ಹೊಸ ಗ್ರಾಹಕರು ಪ್ರತಿ ತಿಂಗಳು 1199 ರೂಪಾಯಿಯಲ್ಲಿ ಬ್ರಾಡ್ ಬ್ಯಾಂಡ್ ಸೌಲಭ್ಯವನ್ನು ಪಡೆಯಬಹುದಾಗಿದೆ.

ಗ್ರಾಹಕರು 1199 ರೂಪಾಯಿಗಳ ರೀಚಾರ್ಜ್ ಮಾಡಿದಲ್ಲಿ ಅವರಿಗೆ ಪ್ಲ್ಯಾಟ್ 2 ಎಂಬಿಪಿಎಸ್ ಸ್ಪೀಡ್ ನಲ್ಲಿ ಅನ್ ಲಿಮಿಟೆಡ್ ಡೇಟಾ ಮತ್ತು ಅನ್ ಲಿಮಿಟೆಡ್ ಕರೆಗಳನ್ನು ಮಾಡಬಹುದು. ಗ್ರಾಹಕರು ಈ ಪ್ಲಾನ್ ಅನ್ನು ಒಂದು ತಿಂಗಳಿನಿಂದ ಮೂರು ವರ್ಷದ ತನಕ ಬೇಕಾದರೂ ಪಡೆಯಬಹುದು. ಈ ಪ್ಲಾನ್ ಅನ್ನು ಒಂದು ವರ್ಷಕ್ಕೆ ಪಡೆಯಬೇಕೆಂದು ಇಚ್ಛಿಸುವವರು ಒಂದು ವರ್ಷಕ್ಕೆ 13,189, 2 ವರ್ಷಕ್ಕೆ 25,179 ಮತ್ತು 3 ವರ್ಷಕ್ಕೆ 35,970 ರೂಪಾಯಿಗಳ ರೀಚಾರ್ಜ್ ಮಾಡಿಸಿಕೊಳ್ಳಬೇಕು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...