alex Certify
ಕನ್ನಡ ದುನಿಯಾ       Mobile App
       

Kannada Duniya

ಬಿ.ಎಸ್.ಎನ್.ಎಲ್. ನಿಂದ ಮತ್ತೊಂದು ಭರ್ಜರಿ ಕೊಡುಗೆ

bsnl 14

ನವದೆಹಲಿ: ಬಿ.ಎಸ್.ಎನ್.ಎಲ್. ಲ್ಯಾಂಡ್ ಲೈನ್ ಗ್ರಾಹಕರಿಗೆ ಪ್ರತಿ ಭಾನುವಾರ ಉಚಿತ ಕರೆ ಸೌಲಭ್ಯ ನೀಡಲಾಗಿದೆ. ಪ್ರಸ್ತುತ ಬಿ.ಎಸ್.ಎನ್.ಎಲ್. ಲ್ಯಾಂಡ್ ಲೈನ್ ನಿಂದ ರಾತ್ರಿ 9 ರಿಂದ ಬೆಳಿಗ್ಗೆ 7 ಗಂಟೆಯವರೆಗೆ ಉಚಿತ ಕರೆ ಮಾಡುವ ಸೌಲಭ್ಯ ಇದೆ.

ಆಗಸ್ಟ್ 15 ರಿಂದ ಹೊಸ ಯೋಜನೆ ಜಾರಿಗೆ ತರಲಾಗಿದೆ. ಬಿ.ಎಸ್.ಎನ್.ಎಲ್. ಲ್ಯಾಂಡ್ ಲೈನ್ ಗ್ರಾಹಕರಿಗೆ ಪ್ರತಿ ಭಾನುವಾರ ಉಚಿತ ಕರೆ ಸೌಲಭ್ಯ ಕಲ್ಪಿಸಲಾಗಿದೆ. ಇದರೊಂದಿಗೆ ಫ್ರೀ ಹೋಮ್ ಸರ್ವೀಸ್ ಎಂಬ ಯೋಜನೆಯನ್ನು ಬಿ.ಎಸ್.ಎನ್.ಎಲ್. ಪರಿಚಯಿಸಿದೆ. ಮನೆಯಲ್ಲಿದ್ದ ಸಂದರ್ಭದಲ್ಲಿ ನಿಮ್ಮ ಮೊಬೈಲ್ ನಿಂದ ಧ್ವನಿ ಸ್ಪಷ್ಟವಾಗಿ ಕೇಳದಿದ್ದಲ್ಲಿ ಅಥವಾ ನೆಟ್ ವರ್ಕ್ ತೊಂದರೆಯಾದಲ್ಲಿ, ಇತರ ಸಮಸ್ಯೆಯಾದಲ್ಲಿ ನೀವು ಲ್ಯಾಂಡ್ ಲೈನ್ ನಲ್ಲೇ ಮಾತನಾಡಬಹುದಾಗಿದೆ.

ಫ್ರೀ ಹೋಮ್ ಸರ್ವೀಸ್ ಯೋಜನೆಯಡಿ ನಿಮ್ಮ ಮೊಬೈಲ್ ಗೆ ಬರುವ ಕರೆಗಳನ್ನು ನಿಮ್ಮ ಮನೆಯ ಬಿ.ಎಸ್.ಎನ್.ಎಲ್. ಲ್ಯಾಂಡ್ ಲೈನ್ ಗೆ ವರ್ಗಾಯಿಸಿಕೊಳ್ಳಬಹುದಾಗಿದೆ. ಈ ಕುರಿತ ಮಾಹಿತಿಗೆ ಬಿಎಸ್ಎನ್ಎಲ್ ವೆಬ್ ಸೈಟ್ ವೀಕ್ಷಿಸಬಹುದಾಗಿದೆ. ಇಲ್ಲವೇ ಟೋಲ್ ಫ್ರೀ ಸಂಖ್ಯೆ 1800 180 1503ಗೆ ಕರೆ ಮಾಡಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...