alex Certify
ಕನ್ನಡ ದುನಿಯಾ       Mobile App
       

Kannada Duniya

ಗ್ರಾಹಕರಿಗೆ ಬಂಪರ್ ಆಫರ್ ನೀಡಿದ ಬಿ ಎಸ್ ಎನ್ ಎಲ್

ಸರ್ಕಾರಿ ಕಂಪನಿ ಬಿ ಎಸ್ ಎನ್ ಎಲ್ ಖಾಸಗಿ ಟೆಲಿಕಾಂ ಕಂಪನಿಗಳಿಗೆ ಸ್ಪರ್ಧೆ ನೀಡ್ತಿದೆ. ನಿರಂತರವಾಗಿ ಕಂಪನಿ ತನ್ನ ಯೋಜನೆಗಳಲ್ಲಿ ಬದಲಾವಣೆ ತರ್ತಿದೆ. ರಿಲಾಯನ್ಸ್ ಜಿಯೋಗೆ ಟಕ್ಕರ್ ನೀಡಲು ಹೊಸ ಹೊಸ ಪ್ಲಾನ್ ಗಳನ್ನು ಬಿ ಎಸ್ ಎನ್ ಎಲ್ ಶುರು ಮಾಡಿದೆ. ಈಗ ಮಾನ್ಸೂನ್ ಆಫರ್ ಅವಧಿಯನ್ನು ಕಂಪನಿ ವಿಸ್ತರಿಸಿದೆ.

ಬಿ ಎಸ್ ಎನ್ ಎಲ್ ಮಾನ್ಸೂನ್ ಆಫರ್ ಸೆಪ್ಟೆಂಬರ್ 15 ರವರೆಗೆ ಮುಂದುವರೆಯಲಿದೆ. ಇದಕ್ಕಾಗಿ ಗ್ರಾಹಕರು 10 ರಿಚಾರ್ಜ್ ನಲ್ಲಿ ಒಂದನ್ನು ಮಾಡಿಸಿಕೊಳ್ಳಬೇಕಾಗುತ್ತದೆ. 186 ರೂಪಾಯಿ, 429 ರೂಪಾಯಿ, 485 ರೂಪಾಯಿ, 666 ರೂಪಾಯಿ ಮತ್ತು 999 ರೂಪಾಯಿ ಪ್ರೀಪೇಯ್ಡ್ ಪ್ಲಾನ್ ನಲ್ಲಿ ಮಾನ್ಸೂನ್ ಆಫರ್ ನೀಡಲಾಗ್ತಿದೆ. ಈ ಪ್ಲಾನ್ ನಲ್ಲಿ ಗ್ರಾಹಕರಿಗೆ ಪ್ರತಿ ದಿನ 2 ಜಿಬಿ ಹೆಚ್ಚುವರಿ ಡೇಟಾ ಸಿಗ್ತಿದೆ.

ಹೆಚ್ಚುವರಿ 2 ಜಿಬಿ ಡೇಟಾವನ್ನು ಬಿ ಎಸ್ ಎನ್ ಎಲ್ ಎಸ್ಟಿವಿ ಪ್ಲಾನ್ ನಲ್ಲೂ ನೀಡ್ತಿದೆ. ಇದ್ರ ಸಿಂಧುತ್ವ 60 ದಿನವಿರಲಿದೆ. 186 ರೂಪಾಯಿ, 429 ರೂಪಾಯಿ ಮತ್ತು 999 ರೂಪಾಯಿ ಎಸ್ಟಿವಿ ಪ್ಲಾನ್ ನಲ್ಲಿ ಗ್ರಾಹಕರಿಗೆ 1 ಜಿಬಿ ಡೇಟಾ ಪ್ರತಿ ದಿನ ಸಿಗ್ತಾಯಿತ್ತು. ಮಾನ್ಸೂನ್ ಪ್ಲಾನ್ ಇದಕ್ಕೆ ಸೇರಿರುವುದ್ರಿಂದ ಪ್ರತಿ ದಿನ 3 ಜಿಬಿ ಡೇಟಾ ಲಭ್ಯವಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...