alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಎಸ್ಎನ್ಎಲ್ ಗ್ರಾಹಕರಿಗೆ ಬಂಪರ್ ಆಫರ್

bsnl ag 25

ನವದೆಹಲಿ: ಖಾಸಗಿ ಕಂಪನಿಗಳಿಗೆ ಬಿ.ಎಸ್.ಎನ್.ಎಲ್. ಕೂಡ ಪೈಪೋಟಿ ನೀಡುತ್ತಿದ್ದು, ಗ್ರಾಹಕರಿಗೆ ಹೊಸ ಕೊಡುಗೆಗಳನ್ನು ನೀಡುತ್ತಿದೆ. ಲ್ಯಾಂಡ್ ಲೈನ್ ನಿಂದ ರಾತ್ರಿ ಹಾಗೂ ಪ್ರತಿ ಭಾನುವಾರ ಉಚಿತ ಕರೆ ಪರಿಚಯಿಸಲಾಗಿದೆ.

ಅದೇ ರೀತಿ ಮಾಸಿಕ 49 ರೂ. ದರದಲ್ಲಿ ಸ್ಥಿರ ದೂರವಾಣಿ ಸಂಪರ್ಕ ನೀಡಲಾಗುತ್ತಿದೆ. ಇದರೊಂದಿಗೆ ಬಿ.ಎಸ್.ಎನ್.ಎಲ್. 1099 ರೂಪಾಯಿಗೆ ಅನ್ ಲಿಮಿಟೆಡ್ 3 ಜಿ ಡೇಟಾ ನೀಡುವ ಹೊಸ ಯೋಜನೆ ಪ್ರಕಟಿಸಿದೆ. ಇದರೊಂದಿಗೆ 549 ರೂಪಾಯಿಗೆ ಸಿಗುತ್ತಿದ್ದ 5 ಜಿ.ಬಿ. ಡೇಟಾವನ್ನು 10 ಜಿ.ಬಿ.ಗೆ ಏರಿಕೆ ಮಾಡಲಾಗಿದೆ. 156 ರೂಪಾಯಿಗೆ 10 ದಿನಗಳ ಅವಧಿಯ 2 ಜಿ.ಬಿ. ಡೇಟಾ ಕೂಡ ನೀಡಲಿದೆ. ಹೀಗೆ ಖಾಸಗಿ ಕಂಪನಿಗಳ ದರ ಸಮರವನ್ನು ಎದುರಿಸಲು ಸಜ್ಜಾಗಿರುವ ಬಿ.ಎಸ್.ಎನ್.ಎಲ್. ಹೊಸ ಕೊಡುಗೆಗಳನ್ನು ಪ್ರಕಟಿಸಿದೆ.

3ಜಿ ಅನ್ ಲಿಮಿಟೆಡ್ ಡೇಟಾ ಯೋಜನೆ 1099 ರೂಪಾಯಿಗೆ ಲಭ್ಯವಿದೆ. ಬಿ.ಎಸ್.ಎನ್.ಎಲ್. ನೆಟ್ ವರ್ಕ್ ಗಳು ಸುಧಾರಿಸಿದ್ದು, ಗ್ರಾಹಕರಿಗೆ ಅನುಕೂಲವಾಗುವಂತೆ ಹೊಸ ಯೋಜನೆ ಪ್ರಕಟಿಸಲಾಗಿದೆ ಎಂದು ಎಂ.ಡಿ. ಅನುಪಮ್ ಶ್ರೀವಾತ್ಸವ್ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...