alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಲ್ಫಿ ತೆಗೆದುಕೊಂಡ ತಪ್ಪಿಗೆ 3 ತಿಂಗಳು ಸೆರೆವಾಸದ ಶಿಕ್ಷೆ

ಬ್ರಿಟನ್ ಮೂಲದ ಯುವತಿಯೊಬ್ಬಳಿಗೆ ದುಬೈ ನ್ಯಾಯಾಲಯ ಮೂರು ತಿಂಗಳ ಕಾಲ ಸೆರೆವಾಸದ ಶಿಕ್ಷೆ ವಿಧಿಸಿರುವ ಶಾಕಿಂಗ್ ಘಟನೆ ನಡೆದಿದೆ. ಹೊಟೇಲ್ ನ ಲಾಬಿಯೊಂದರಲ್ಲಿ ಮಲಗಿದ್ದ ಬ್ಯುಸಿನೆಸ್ ಮ್ಯಾನ್ ಒಬ್ಬರ ಜೊತೆ ಯುವತಿ ಮತ್ತಾಕೆಯ ಸ್ನೇಹಿತೆ ಸೆಲ್ಫಿ ತೆಗೆದುಕೊಂಡಿದ್ದರು. ಆನಂತರ ಆ ಬ್ಯುಸಿನೆಸ್ ಮ್ಯಾನ್ ನ್ನ ಅಪಹಾಸ್ಯ ಮಾಡಿದ್ದರು. ಆತನೊಂದಿಗೆ ಕಾದಾಟಕ್ಕೂ ಇಳಿದಿದ್ದರು. ಈ ಬಗ್ಗೆ ಆತ ಪೊಲೀಸರಿಗೆ ದೂರು ನೀಡಿದ್ದ.

ಸದ್ಯ ಜೈಲು ಶಿಕ್ಷೆಗೆ ಗುರಿಯಾಗಿರುವ ಯುವತಿಯನ್ನು ಅಶಾ ಹುಟಿಸನ್ ಅಂತ ಗುರುತಿಸಲಾಗಿದೆ. ಸದ್ಯ ಆಕೆಯ ಸ್ನೇಹಿತೆ ಈಗಾಗ್ಲೇ ದುಬೈ ತೊರೆದಿದ್ದು ಅಶಾ ಮೇಲೆ ಹಲ್ಲೆ ನಡೆಸಿದ ಆರೋಪವೂ ದಾಖಲಾಗಿದೆ. ಮಲಗಿದ್ದ ಬ್ಯುಸಿನೆಸ್ ಮ್ಯಾನ್ ಕೆನ್ನೆಗೆ ಹುಟಿಸನ್ ಸ್ನೇಹಿತೆ ಹೊಡೆದಿದ್ದಳು ಅಂತ ಹೇಳಲಾಗ್ತಿದೆ.

ಘಟನೆ ನಡೆದ ನಂತರದಲ್ಲಿ ಹುಟಿಸನ್ನ ಸ್ನೇಹಿತೆ, ಆಕೆಯ ಬಾಯ್ ಫ್ರೆಂಡ್ ಎಲ್ಲರೂ ದೇಶಬಿಟ್ಟರು. ಆದ್ರೆ ಹುಟಿಸನ್ ಕೆಲಸದ ನಿಮಿತ್ತ ದುಬೈನಲ್ಲೇ ನೆಲೆಸಬೇಕಾಗಿದೆ. ಹಾಗಾಗಿ ಆಕೆಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ಹುಟಿಸನ್ ಈ ಪ್ರಕರಣದಲ್ಲಿ ನಿರಪರಾಧಿಯಾಗಿದ್ದರೂ ಆಕೆಗೆ ಶಿಕ್ಷೆ ನೀಡಲಾಗಿದೆ. ದುಬೈನಲ್ಲಿ ಅಕೌಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಹುಟಿಸನ್ ಕಳೆದ ವಾರವಷ್ಟೇ ಬ್ರಿಟನ್ ಗೆ ಮರಳಿದ್ದು, ಈ ವಾರ ಪ್ರಕರಣದ ತೀರ್ಪು ಹೊರಬಿದ್ದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...