alex Certify
ಕನ್ನಡ ದುನಿಯಾ       Mobile App
       

Kannada Duniya

ಹೀಗೆ ಮಾಡಿದ್ರೆ ಹೋಟೆಲ್ ನಲ್ಲಿ ಸಿಗುತ್ತೆ ಡಿಸ್ಕೌಂಟ್…!

ಚೆನ್ನೈ: ಆಹಾರ ಕೊಂಡೊಯ್ಯಲು ತಮ್ಮ ಮನೆ ಪಾತ್ರೆಗಳೊಂದಿಗೆ ಬಂದ ಗ್ರಾಹಕರಿಗೆ ತಮಿಳುನಾಡಿನ ಹೋಟೆಲ್ ಗಳಲ್ಲಿ ಇನ್ನು ಮುಂದೆ ವಿಶೇಷ ರಿಯಾಯಿತಿ ಸಿಗಲಿದೆ. ತಮಿಳುನಾಡಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಮಾಡಿರುವ ಹಿನ್ನೆಲೆಯಲ್ಲಿ ಚೆನ್ನೈ ಹೋಟೆಲ್ ಅಸೋಸಿಯೇಷನ್ ಇಂಥದ್ದೊಂದು ನಿರ್ಧಾರಕ್ಕೆ ಬಂದಿದೆ.

ಪ್ಲಾಸ್ಟಿಕ್ ಪೇಪರ್ ಕಪ್, ಕವರ್, ಕ್ಯಾರಿ ಬ್ಯಾಗ್, ಸ್ಟ್ರಾ, ವಾಟರ್ ಸ್ಯಾಚೆಟ್ ಬಳಕೆಯನ್ನು ಅಲ್ಲಿನ ‌ಸರ್ಕಾರ ನಿಷೇಧಿಸಿದೆ. ಇದೇ ವೇಳೆ ಗ್ರಾಹಕರು ತಂದ ಪಾತ್ರೆಗಳಲ್ಲಿ ಆಹಾರ ಸೇವಿಸುವ ಪದ್ದತಿಯನ್ನು ಜಿಲ್ಲಾದ್ಯಂತ ಜಾರಿಗೊಳಿಸುವ ಉದ್ದೇಶವಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಎಂ. ರವಿ ಹೇಳಿದ್ದಾರೆ.

ಗ್ರಾಹಕರು ಆಹಾರ ಕೊಂಡೊಯ್ಯಲು ಪಾತ್ರೆ ತಂದರೆ ಹೋಟೆಲ್ ಗಳಲ್ಲಿ ಶೇ.5 ರಷ್ಟು ರಿಯಾಯಿತಿ ನೀಡಲು ಇತ್ತೀಚೆಗೆ ನಡೆದ ಸಂಘದ ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ರವಿ ಹೇಳಿದ್ದಾರೆ.

ಪ್ಲಾಸ್ಟಿಕ್ ಬಳಕೆ ನಿಷೇಧದಿಂದ ಆತಿಥ್ಯ ಉದ್ಯಮಕ್ಕೆ ಹಿನ್ನೆಡೆಯಾಗದು ಎಂಬ ಅಭಿಪ್ರಾಯವೂ ಇದೆ. ಬಾಳೆ ಎಲೆ ಮತ್ತು ಅಲ್ಯುಮಿನಿಯಂ ಕೋಟೆಡ್ ಕವರ್ ಬಳಕೆ ಮಾಡಿ ಪ್ಯಾಕಿಂಗ್ ಮಾಡಬಹುದು, ಜೊತೆಗೆ ಮನೆ ಪಾತ್ರೆ ಬಳಕೆಯಿಂದ ಯಾವುದೇ ಸಮಸ್ಯೆಯಾಗದು ಎಂದು ಹೇಳಲಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...