alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತೀಯರ ಈ ನಡೆಗೆ ಹೆದರಿದ ಚೀನಾ

products

ಉರಿ ದಾಳಿ ನಂತ್ರ ಭಾರತ-ಪಾಕಿಸ್ತಾನದ ನಡುವೆ ನಡೆಯುತ್ತಿರುವ ಗಲಾಟೆ ಚೀನಾ ಮೇಲೆ ನೇರ ಪರಿಣಾಮ ಬೀರಿದೆ. ದಾಳಿ ನಂತ್ರ ಚೀನಾ ಉತ್ಪಾದನೆಯನ್ನು ಬಹಿಷ್ಕರಿಸುವಂತೆ ಅನೇಕ ಸಂಘಟನೆಗಳು ಜಾಗೃತಿ ಅಭಿಯಾನ ಶುರುಮಾಡಿವೆ. ಜನರು ನಿಧಾನವಾಗಿ ಈ ಬಗ್ಗೆ ಜಾಗೃತರಾಗ್ತಿದ್ದಾರೆ. ಚೀನಾ ವಸ್ತುಗಳನ್ನು ಬಹಿಷ್ಕರಿಸಿ, ಸ್ವದೇಶಿ ವಸ್ತುಗಳ ಖರೀದಿಗೆ ಗಮನ ನೀಡುತ್ತಿದ್ದಾರೆ. ಇದು ಚೀನಾ ವ್ಯಾಪಾರದ ಮೇಲೆ ನೇರ ಪರಿಣಾಮ ಬೀರಿದೆ.

ದೀಪಾವಳಿಯ ಸಂದರ್ಭದಲ್ಲಿ ಲೈಟ್ ಹಾಗೂ ಇತರ ವಸ್ತುಗಳನ್ನು ಭಾರತೀಯರು ಬಹಿಷ್ಕರಿಸುತ್ತಿದ್ದು, ಇದರಿಂದಾಗಿ ಶೇಕಡಾ 30-40 ರಷ್ಟು ಚೀನಾ ವಸ್ತುಗಳ ಮಾರಾಟದಲ್ಲಿ ಇಳಿಕೆ ಕಂಡುಬಂದಿದೆ. ಎಲ್ ಸಿ ಡಿ ಯಲ್ಲಿ ಶೇಕಡಾ 10-15 ರಷ್ಟು ಹಾಗೂ ಮೊಬೈಲ್ ಮಾರಾಟದಲ್ಲಿ ಶೇಕಡಾ ಎರಡರಷ್ಟು ಮಾರಾಟ ಕಡಿಮೆಯಾಗಿದೆ.

ಚೀನಾದಲ್ಲಿ ಉತ್ಪಾದನೆಯಾಗುವ ಅಲಂಕಾರಿಕ ದೀಪಗಳ ಮಾರಾಟ ದಿಢೀರ್ ಕಡಿಮೆಯಾಗಿದೆ. ಚೀನಾ ವಸ್ತುಗಳ ಬೆಲೆ ಕಡಿಮೆ. ಆದ್ರೆ ಸ್ವದೇಶಿ ವಸ್ತುಗಳ ಮೇಲೆ ಪ್ರೀತಿ ವ್ಯಕ್ತಪಡಿಸಿರುವ ಜನರು, ದೇಶದಲ್ಲಿ ತಯಾರಾಗುವ ವಸ್ತುಗಳನ್ನು ಖರೀದಿ ಮಾಡ್ತಿದ್ದಾರೆ. ಇದು ಒಳ್ಳೆ ಬೆಳವಣಿಗೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...