alex Certify
ಕನ್ನಡ ದುನಿಯಾ       Mobile App
       

Kannada Duniya

ಟಿಕೆಟ್ ಪಡೆದು ಮೊದಲು ಪ್ರಯಾಣಿಸಿ ನಂತ್ರ ಹಣ ನೀಡಿ

irctc_o7b5dre

ಭಾರತೀಯ ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಇನ್ನಷ್ಟು ಹತ್ತಿರವಾಗಿದೆ. ರೈಲ್ವೆ ವೆಬ್ಸೈಟ್ ಸಂಪೂರ್ಣ ಡಿಜಿಟಲ್ ಆಗಿದ್ದು, ಪ್ರಯಾಣಿಕರಿಗೆ ಅನುಕೂಲವಾಗುವ ಸೌಲಭ್ಯಗಳನ್ನು ನೀಡ್ತಾ ಇದೆ. ಈ ತಿಂಗಳಲ್ಲಿ ರೈಲ್ವೆ ಇಲಾಖೆ ಹೊಸ ಯೋಜನೆಯೊಂದನ್ನು ಶುರು ಮಾಡಿದೆ. ಇದ್ರ ಪ್ರಕಾರ ಪ್ರಯಾಣಿಕರು ನಾಲ್ಕು ದಿನ ಮೊದಲು ಟಿಕೆಟ್ ಬುಕ್ ಮಾಡಬೇಕು. ಆದ್ರೆ ತಕ್ಷಣ ಹಣ ಪಾವತಿ ಮಾಡಬೇಕಾಗಿಲ್ಲ. ಟಿಕೆಟ್ ಬುಕ್ ಆದ 14 ದಿನಗಳೊಳಗೆ ಹಣ ಪಾವತಿ ಮಾಡಬೇಕು. ಇದಕ್ಕೆ ರೈಲ್ವೆ ಇಲಾಖೆ ಶೇಕಡಾ 3.5 ರಷ್ಟು ಸೇವಾ ಶುಲ್ಕ ವಿಧಿಸಲಿದೆ.

ಐ ಆರ್ ಸಿ ಟಿ ಸಿ ವಕ್ತಾರ ಸಂದೀಪ್ ದತ್ತಾ ಪ್ರಕಾರ, ಹಣದ ಸಮಸ್ಯೆ ಎದುರಿಸುತ್ತಿರುವವರಿಗೆ ಇದು ಅನುಕೂಲವಾಗಲಿದೆ. ಟಿಕೆಟ್ ಬುಕ್ ಮಾಡಿದ ತಕ್ಷಣ ಹಣ ಪಾವತಿ ಮಾಡಬೇಕಾಗಿಲ್ಲ. ಹಣ ಪಾವತಿಗೆ ಸಮಯ ಸಿಗಲಿದೆ. ಈಗಾಗ್ಲೇ 50 ಜನರು ಈ ಯೋಜನೆಯ ಲಾಭ ಪಡೆದಿದ್ದಾರೆ.

14 ದಿನಗಳ ನಂತ್ರವೂ ಹಣ ಪಾವತಿ ಮಾಡದ ಪ್ರಯಾಣಿಕರಿಗೆ ಇಲಾಖೆ ದಂಡ ವಿಧಿಸಲಿದೆ. ಪದೇ ಪದೇ ಇದೇ ತಪ್ಪನ್ನು ಮಾಡುವ ಪ್ರಯಾಣಿಕರು ಈ ಸೇವೆಯಿಂದ ವಂಚಿತರಾಗಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...