alex Certify
ಕನ್ನಡ ದುನಿಯಾ       Mobile App
       

Kannada Duniya

2016ರಲ್ಲಿ ಅಪ್ಪ-ಅಮ್ಮನಾಗಿ ಪ್ರಮೋಷನ್ ಪಡೆದ ತಾರೆಯರು

0

ಹೊಸ ವರ್ಷ ಬರ್ತಾ ಇದೆ. 2016 ಮುಗಿದು 2017 ಕ್ಕೆ ಕಾಲಿಡ್ತಾ ಇದ್ದೇವೆ. 2016 ಅನೇಕರ ಜೀವನದಲ್ಲಿ ಖುಷಿ ನೀಡಿದ್ದರೆ ಮತ್ತೆ ಕೆಲವರಿಗೆ ದುಃಖ ನೀಡಿದೆ. ಬಾಲಿವುಡ್  ಸೇರಿದಂತೆ ಬಣ್ಣದ ಲೋಕದಲ್ಲಿ ಕೆಲಸ ಮಾಡ್ತಿರುವ ಕೆಲ ನಟ-ನಟಿಯರಿಗೆ 2016 ಅತ್ಯಂತ ಖುಷಿ ನೀಡಿದ ವರ್ಷ. 2016 ರಲ್ಲಿ ಪ್ರಸಿದ್ಧ ನಟ-ನಟಿಯರು ವೈಯಕ್ತಿಕ ಜೀವನದಲ್ಲಿ ಪ್ರಮೋಷನ್ ಪಡೆದಿದ್ದಾರೆ. ಅಪ್ಪ-ಅಮ್ಮನಾಗಿ ಖುಷಿ ಅನುಭವಿಸಿದ್ದಾರೆ.

2016ರಲ್ಲಿ ತಂದೆ-ತಾಯಿಯಾದ ಸೆಲೆಬ್ರಿಟಿಗಳು:

ಕರೀನಾ ಕಪೂರ್ ಖಾನ್-ಸೈಫ್ ಅಲಿ ಖಾನ್ : ಡಿಸೆಂಬರ್ 20, 2016. ತೈಮೂರ್ ಗೆ ಜನ್ಮ ನೀಡಿದ ಬಾಲಿವುಡ್ ಬೇಬೋ.

ಶಾಹಿದ್ ಕಪೂರ್-ಮೀರಾ ಕಪೂರ್ : 26 ಆಗಸ್ಟ್ 2016ಕ್ಕೆ ಶಾಹಿದ್ ಕಪೂರ್ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಹೆಣ್ಣು ಮಗು ಮಿಶಾಗೆ ತಂದೆಯಾಗಿದ್ದಾನೆ ಶಾಹಿದ್.

ಫವಾದ್ ಖಾನ್ : ಪಾಕಿಸ್ತಾನದ ನಟ ಫವಾದ್ ಖಾನ್ ಮತ್ತೊಮ್ಮೆ ತಂದೆಯಾಗಿದ್ದಾರೆ. ಪತ್ನಿ ಸದಾಫ್ ಅಕ್ಟೋಬರ್ 4,2016 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ರಿತೇಶ್ ದೇಶ್ಮುಕ್ – ಜೆನಿಲಿಯಾ : ಜೂನ್ 1, 2016 ರಂದು ಜೆನಿಲಿಯಾ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಜೆನಿಲಿಯಾ-ರಿತೇಶ್ ಗೆ ಮತ್ತೊಂದು ಮುದ್ದಾದ ಗಂಡು ಮಗು ಜನಿಸಿದೆ.

ಅರ್ಪಿತಾ ಖಾನ್ : ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ ಮಾರ್ಚ್ 30,2016 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಗೀತಾ ಬಸ್ರಾ-ಹರ್ಭಜನ್ ಸಿಂಗ್ : ಜುಲೈ 27,2016 ರಂದು ಗೀತಾ ಬಸ್ರಾ ಅಮ್ಮನಾಗಿದ್ದಾರೆ. ಹರ್ಭಜನ್ ಮುದ್ದಾದ ಹೆಣ್ಣು ಮಗುವಿನ ತಂದೆಯಾಗಿದ್ದಾರೆ.

ನಿಖಿಲ್ ದ್ವಿವೇದಿ –ಗೌರಿ ಪಂಡೀತ್ : ಜನವರಿ 15,2016 ರಂದು ಪೋಷಕರಾಗಿದ್ದಾರೆ.

ಅಲ್ಲು ಅರ್ಜುನ್ –ಸ್ನೇಹಾ ರೆಡ್ಡಿ : ತೆಲಗು ನಟ ಅಲ್ಲು ಅರ್ಜುನ್ ನವೆಂಬರ್ 11,2016 ರಂದು ಎರಡನೇ ಬಾರಿ ಅಪ್ಪನಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...