alex Certify
ಕನ್ನಡ ದುನಿಯಾ       Mobile App
       

Kannada Duniya

ಷೇರುಪೇಟೆಯಲ್ಲಿ ತಲ್ಲಣ! ಹೂಡಿಕೆದಾರರಿಗೆ ಭಾರೀ ನಷ್ಟ

ಮುಂಬೈ: ಭಾರತೀಯ ಷೇರು ಮಾರುಕಟ್ಟೆಯಲ್ಲಿ ತಲ್ಲಣವುಂಟಾಗಿದೆ. ಬಜೆಟ್ ನಂತರದಲ್ಲಿ ಇಳಿಕೆಯ ಹಾದಿಯಲ್ಲಿರುವ ಸೆನ್ಸೆಕ್ಸ್ ಮಂಗಳವಾರ ಬೆಳಿಗ್ಗೆ 1213 ಅಂಕಗಳಷ್ಟು ಕುಸಿತ ಕಂಡಿದ್ದು, ಅಲ್ಲೋಲಕಲ್ಲೋಲವಾಗಿದೆ.

6 ವರ್ಷಗಳ ಕನಿಷ್ಟ ಪ್ರಮಾಣಕ್ಕೆ ಸೆನ್ಸೆಕ್ಸ್ ಕುಸಿದಿದೆ. ಮಂಗಳವಾರ 1213 ಅಂಕಗಳು ಕುಸಿತವಾಗಿ 33,543.20 ಅಂಕ ತಲುಪಿದೆ. ಸೆನ್ಸೆಕ್ಸ್ ಸೂಚ್ಯಂಕ ನಿನ್ನೆ 310 ಅಂಕ ನಷ್ಟದೊಂದಿಗೆ 34,757.16 ಅಂಕಗಳೊಂದಿಗೆ ವಹಿವಾಟು ಕೊನೆಗೊಳಿಸಿತ್ತು.

ನಿಫ್ಟಿ 376 ಅಂಕ ಕುಸಿತವಾಗಿ 24,773.5 ಅಂಕಗಳಿಗೆ ಇಳಿದಿದೆ. ಮಂಗಳವಾರ ವಹಿವಾಟು ಆರಂಭವಾಗುತ್ತಿದ್ದಂತೆ ಸೂಚ್ಯಂಕ ಪಾತಾಳಕ್ಕೆ ಕುಸಿದಿದೆ. ಬಜೆಟ್ ಮಂಡನೆಯ ಬಳಿಕ ಸೂಚ್ಯಂಕ ನಿರಂತರವಾಗಿ ಕುಸಿತದ ಹಾದಿಯಲ್ಲಿದೆ. ಇದಕ್ಕೆ ಕಾರಣ ಕೇಂದ್ರ ಸರ್ಕಾರದ ನಿಲುವು ಎಂದು ಹೇಳಲಾಗಿದೆ.

ಬಜೆಟ್ ಮಂಡನೆಯ ಬಳಿಕ ಷೇರು ಕುಸಿತದ ಬಗ್ಗೆ ಕೇಂದ್ರ ಗಮನ ನೀಡಿಲ್ಲ. ಜಿ.ಎಸ್.ಟಿ., ಬ್ಯಾಂಕ್ ಇಂಟ್ರೆಸ್ಟ್ ಕಡಿಮೆ ಮೊದಲಾದವುಗಳಿಂದ ಸಣ್ಣ ಹೂಡಿಕೆದಾರರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದಾರೆ. ಬಜೆಟ್ ನಲ್ಲಿ ಈ ಬಗ್ಗೆ ಉತ್ತೇಜಕ ಕ್ರಮ ಕೈಗೊಂಡಿಲ್ಲ. ಇದರಿಂದಾಗಿ ಷೇರು ಮಾರುಕಟ್ಟೆ ಕುಸಿತದ ಹಾದಿಯಲ್ಲಿದೆ ಎಂದು ಹೇಳಲಾಗಿದೆ.

ಮುಂಬೈ ದಲಾಲ್ ಸ್ಟ್ರೀಟ್ ಷೇರು ಮಾರುಕಟ್ಟೆಯಲ್ಲಿ ಕೋಲಾಹಲವಾಗಿದೆ. ಸರ್ಕಾರ ಮಧ್ಯಪ್ರವೇಶಿಸದಿದ್ದರೆ ಜನಸಾಮಾನ್ಯರ ಸುಮಾರು 7 -8 ಲಕ್ಷ ಕೋಟಿ ರೂ. ನಷ್ಟವಾಗಲಿದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...