alex Certify
ಕನ್ನಡ ದುನಿಯಾ       Mobile App
       

Kannada Duniya

ಸಾಮಾಜಿಕ ಜಾಲತಾಣಗಳ ನಿಷೇಧದ ಕುರಿತು ಟೆಲಿಕಾಂ ಕಂಪನಿಗಳು ಹೇಳಿದ್ದೇನು?

ಫೇಸ್ಬುಕ್, ವಾಟ್ಸಾಪ್, ಟೆಲಿಗ್ರಾಮ್ ಮತ್ತು ಇನ್ಸ್ಟಾಗ್ರಾಂ ನಂತಹ ಅಪ್ಲಿಕೇಶನ್ ಗಳನ್ನು ನಿರ್ಬಂಧಿಸುವ ಯಾವುದೇ ಕ್ರಮವು ವಾಕ್ ಸ್ವಾತಂತ್ರ್ಯವನ್ನು ಮೊಟಕುಗೊಳಿಸುತ್ವೆ ಎಂದು ದೂರ ಸಂಪರ್ಕ ಕ್ಷೇತ್ರದ ಕಂಪೆನಿಗಳು ಕೇಂದ್ರ ಸರ್ಕಾರಕ್ಕೆ ತಿಳಿಸಿವೆ. ಜತೆಗೆ, ಈ ರೀತಿಯ ಅಪ್ಲಿಕೇಷನ್ ಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಲು ತಾಂತ್ರಿಕವಾಗಿ ಅಸಾಧ್ಯವೆಂದು ಸ್ಪಷ್ಟಪಡಿಸಿವೆ.

ಈ ವಿಚಾರವಾಗಿ ದೂರ ಸಂಪರ್ಕ ಇಲಾಖೆಗೆ ಪತ್ರ ಬರೆದಿರುವ ಸೆಲ್ಯುಲರ್ ಆಪರೇಟರ್ಸ್ ಅಸೋಸಿಯೇಷನ್ ​​ಆಫ್ ಇಂಡಿಯಾ, ಅಪ್ಲಿಕೇಶನ್ ಅನ್ನು ತಡೆಯುವುದರಿಂದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ತತ್ವಕ್ಕೆ ವಿರುದ್ಧವಾಗಿ ಕ್ರಮ ಕೈಗೊಂಡಂತಾಗುತ್ತವೆ ಎಂದು ವಿವರಿಸಿದೆ.

ಪ್ರಪಂಚದಾದ್ಯಂತದ ಶತಕೋಟಿ ಬಳಕೆದಾರರನ್ನು ಹೊಂದಿರುವ ಯಾವುದೇ ಅಪ್ಲಿಕೇಶನ್ನನ್ನು ಸಂಪೂರ್ಣ ನಿರ್ಬಂಧಿಸಿದರೆ ಅನೇಕ ವ್ಯವಹಾರ, ವಾಣಿಜ್ಯ ಚಟುವಟಿಕೆ ಮೇಲೆ ಪರಿಣಾಮ ಬೀರಲಿದೆ ಎಂದು ಸೆಲ್ಯುಲರ್ ಆಪರೇಟರ್ಸ್ ಅಸೋಸಿಯೇಷನ್ ​​ಆಫ್ ಇಂಡಿಯಾ ತಿಳಿಸಿದೆ.

ಸಾಮಾಜಿಕ ಜಾಲತಾಣದ ಮೂಲಕ ಉದಯೋನ್ಮುಖ ವ್ಯವಹಾರಗಳು ಮತ್ತು ಸಂವಹನ ವಿಕಸನವಾಗುತ್ತಿದೆ. ಈ ಹಂತದಲ್ಲಿ ಅಪ್ಲಿಕೇಷನ್ ಗಳನ್ನು ಪೂರ್ಣ ತಡೆದರೆ ಮುಗ್ಧ ಬಳಕೆದಾರರ ಮೇಲೆ ಪರಿಣಾಮ ಬೀರಬಹುದೆಂದೂ ಸಹ ಅಭಿಪ್ರಾಯಪಟ್ಟಿದೆ.

ಭಾರತಿ ಏರ್ಟೆಲ್, ವೊಡಾಫೋನ್ ಇಂಡಿಯಾ ಮತ್ತು ರಿಲಯನ್ಸ್ ಜಿಯೊ ಇನ್ಫೋಕಾಮ್ ಸೇರಿದಂತೆ ಎಲ್ಲಾ ಪ್ರಮುಖ ಸೆಲ್ಯುಲರ್ ಆಪರೇಟರ್ ಗಳು ಒಕ್ಕೂಟದಲ್ಲಿದ್ದಾರೆ. ಯಾವುದೇ ನಿಯಂತ್ರಣ, ತಡೆಗಟ್ಟುವಿಕೆ ಪ್ರಕ್ರಿಯೆ ಖಾತೆಯ ಮಟ್ಟದಲ್ಲಿ ಆಗಬೇಕು. ಅಪ್ಲಿಕೇಶನ್ ಅಥವಾ ಸೈಟ್ ಗಳನ್ನು ತಡೆಯುವ ಬದಲು ಬಳಕೆದಾರರನ್ನು ಅಥವಾ ದುರುದ್ದೇಶಪೂರಿತ ವಿಷಯವನ್ನು ನಿರ್ಬಂಧಿಸಬೇಕು ಎಂದು ಪತ್ರದಲ್ಲಿ ಹೇಳಿದೆ.

ಸುಳ್ಳು ಸುದ್ದಿ ಹರಡುವಿಕೆ, ವದಂತಿಯಿಂದ ಸಮಾಜದಲ್ಲಿ ನಡೆಯುತ್ತಿರುವ ಘಟನೆ, ಪರಿಣಾಮದ ಹಿನ್ನೆಲೆ ವಾಟ್ಸಾಪ್, ಫೇಸ್ ಬುಕ್ ನಂಥ ತಾಣಗಳ‌ ಮೇಲೆ ನಿಯಂತ್ರಣ ಹೇರುವ ಪ್ರಸ್ತಾಪದ ಹಿನ್ನೆಲೆಯಲ್ಲಿ ಈ ಬೆಳವಣಿಗೆಗಳು ನಡೆದಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...