alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದಲ್ಲಿ ಬಿಡುಗಡೆಯಾದ BlackBerry KEY 2 ಬೆಲೆಯೆಷ್ಟು ಗೊತ್ತಾ?

ಬ್ಲ್ಯಾಕ್ಬೆರಿಯ ಹೊಸ ಫೋನ್ BlackBerry KEY 2 ಭಾರತದಲ್ಲಿ ಬಿಡುಗಡೆಯಾಗಿದೆ.ಗೊತ್ತಿರುವಂತೆ ಬ್ಲ್ಯಾಕ್ಬೆರಿ ಮೊಬೈಲ್ ವ್ಯವಹಾರ ಬಂದ್ ಮಾಡಿದೆ. ಆದ್ರೆ ಟಿಸಿಎಲ್ ಈಗ ಬ್ಲ್ಯಾಕ್ಬೆರಿ ಸ್ಮಾರ್ಟ್ಫೋನ್ ತಯಾರಿಸುತ್ತಿದೆ.

ಇದೇ ಮೊದಲ ಬಾರಿ ಡ್ಯುಯೆಲ್ ರಿಯರ್ ಕ್ಯಾಮರಾದೊಂದಿಗೆ ಬ್ಲ್ಯಾಕ್ಬೆರಿ ಮೊಬೈಲ್ ಮಾರುಕಟ್ಟೆಗೆ ಬಂದಿದೆ. 4.5 ಫುಲ್ ಹೆಚ್ಡಿ ಡಿಸ್ಲ್ಪೇ ಹೊಂದಿರುವ ಈ ಫೋನ್ ಗೆ 2.5 ಡಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ನೀಡಲಾಗಿದೆ. 6 ಜಿಬಿ ರ್ಯಾಮ್ ನೀಡಲಾಗಿದೆ. 64 ಜಿಬಿ ಇಂಟರ್ನೆಲ್ ಮೆಮೊರಿ ಹೊಂದಿದ್ದು ಕಾರ್ಡ್ ಮೂಲಕ ಅದನ್ನು 128 ಜಿಬಿಗೆ ವಿಸ್ತರಿಸಬಹುದಾಗಿದೆ.

ಫೋಟೋಕ್ಕಾಗಿ 2 ರಿಯರ್ ಕ್ಯಾಮರಾ ನೀಡಲಾಗಿದೆ. ಎರಡೂ ಕ್ಯಾಮರಾ 12 ಮೆಗಾಪಿಕ್ಸಲ್ ಹೊಂದಿದೆ. ಇದ್ರಲ್ಲಿ ಸೆಲ್ಫಿಗಾಗಿ 8 ಮೆಗಾಪಿಕ್ಸಲ್ ಕ್ಯಾಮರಾ ನೀಡಲಾಗಿದೆ. BlackBerry KEY 2 ಮೊಬೈಲ್ ಬೆಲೆ 42,990 ರೂಪಾಯಿ. ಅಮೆಜಾನ್ ಇಂಡಿಯಾ ವೆಬ್ಸೈಟ್ ನಲ್ಲಿ ಜುಲೈ 31ರ ನಂತ್ರ ಗ್ರಾಹಕರಿಗೆ ಮೊಬೈಲ್ ಲಭ್ಯವಾಗಲಿದೆ. ಐಸಿಐಸಿಐ ಕಾರ್ಡ್ ಬಳಕೆದಾರರಿಗೆ 4,450 ರೂಪಾಯಿ ಕ್ಯಾಶ್ಬ್ಯಾಕ್ ಸಿಗಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...