alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಟ್ ಕಾಯಿನ್ ಖಾತೆ ಹ್ಯಾಕ್ ಮಾಡಿ ಹಣ ಲೂಟಿ

ಕ್ರಿಪ್ಟೋ ಕರೆನ್ಸಿ ಬಿಟ್ ಕಾಯಿನ್ ಸಾಕಷ್ಟು ಸದ್ದು ಮಾಡಿತ್ತು. ಎಷ್ಟೋ ಮಂದಿ ಮುಗಿಬಿದ್ದು ಬಿಟ್ ಕಾಯಿನ್ಸ್ ಖರೀದಿ ಕೂಡ ಮಾಡಿದ್ದಾರೆ. ಆದ್ರೆ ಇದರಿಂದ ನಷ್ಟ ಅನುಭವಿಸಿದವರ ಸಂಖ್ಯೆ ಕೂಡ ಕಮ್ಮಿಯೇನಿಲ್ಲ.

ದೆಹಲಿ ಮೂಲದ ಮಹಿಳೆಯೊಬ್ಬಳು ಬಿಟ್ ಕಾಯಿನ್ಸ್ ನಲ್ಲಿ ಹಣ ಹೂಡಿಕೆ ಮಾಡಿ 41 ಲಕ್ಷ ರೂಪಾಯಿ ಕಳೆದುಕೊಂಡಿದ್ದಾಳೆ. ಆಕೆಯ ವಾಲೆಟ್ ಹಾಗೂ ಅಕೌಂಟನ್ನು ಯಾರೋ ಅಪರಿಚಿತರು ಹ್ಯಾಕ್ ಮಾಡಿದ್ದಾರಂತೆ.

ಕೇವಲ ತಾನೊಬ್ಬಳೇ ಅಲ್ಲ ಇನ್ನೂ ಹಲವರ ಖಾತೆಗಳು ಹ್ಯಾಕ್ ಆಗಿವೆ. ಸುಮಾರು 50 ಕೋಟಿ ರೂಪಾಯಿ ಮೌಲ್ಯದ ಬಿಟ್ ಕಾಯಿನ್ಸ್ ಹ್ಯಾಕರ್ ಗಳ ಪಾಲಾಗಿದೆ ಅಂತಾ ಆ ಮಹಿಳೆ ಹೇಳಿದ್ದಾಳೆ.

ದೆಹಲಿಯ ಮಯೂರ್ ವಿಹಾರ್ ನಿವಾಸಿಯಾಗಿರೋ ಆ ಮಹಿಳೆ ಆರ್ಥಿಕ ಅಪರಾಧ ದಳಕ್ಕೆ ದೂರು ನೀಡಿದ್ದಾಳೆ. ಇದಕ್ಕೂ ಮೊದಲು ಸಹ ಆಕೆ ಬಿಟ್ ಕಾಯಿನ್ಸ್ ನಲ್ಲಿ 6.5 ಲಕ್ಷ ರೂಪಾಯಿ ಕಳೆದುಕೊಂಡಿದ್ದಳು. ಈ ಬಗ್ಗೆ ಸೈಬರ್ ಸೆಲ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...