alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಲ್ ಗಳಿಗೂ ಬಂತು ಬಯೋ ಮೆಟ್ರಿಕ್ ಸಿಸ್ಟಮ್

ಪಬ್ ಗಳ ಒಳಗೆ ತೆರಳುವ ಮುನ್ನ ಬೌನ್ಸರ್ ವಯಸ್ಸನ್ನು ಖಚಿತಪಡಿಸಿಕೊಳ್ಳೋಕೆ ಗುರುತಿನ ಚೀಟಿ ನೋಡೋದು ಸಹಜ. ಆದ್ರೆ ಹರಿಯಾಣದ ಗುರುಗ್ರಾಮ್ ನ ಎಂ.ಜಿ. ರೋಡ್ ನಲ್ಲಿರುವ ಮಾಲ್ ಒಂದರಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೆ ತರುವ ಪ್ರಯತ್ನ ನಡೆಯುತ್ತಿದೆ.

ಎಂ.ಜಿ ರೋಡ್ ನಲ್ಲಿರುವ ಮಾಲ್ ಒಂದರ ಬಾರ್ ನಲ್ಲಿ ಇತ್ತೀಚೆಗೆ ಪೊಲೀಸರು ದಾಳಿ ನಡೆಸಿದ್ದರು. ಬಾರ್ ಮತ್ತು ಪಬ್ ಗಳಲ್ಲಿ ವೇಶ್ಯಾವಾಟಿಕೆಯ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿರುವ ಹಿನ್ನಲೆಯಲ್ಲಿ ಪೊಲೀಸರು ಅನಿರೀಕ್ಷಿತವಾಗಿ ದಾಳಿ ನಡೆಸುತ್ತಿದ್ದಾರೆ. 20 ದಿನಗಳ ಹಿಂದೆ ಕೂಡ ಮಾಲ್ ಒಂದರಲ್ಲಿನ ಪ್ರಖ್ಯಾತ ಬಾರ್ ಮೇಲೆ ಪೊಲೀಸರು ದಾಳಿ ನಡೆಸಿದ್ದರ ಪರಿಣಾಮ ಬಾರ್ ನ ವ್ಯವಹಾರಕ್ಕೆ ಅಡ್ಡಿಯುಂಟಾಗಿತ್ತು.

ಹೀಗೆ ಪದೇ ಪದೇ ಪೊಲೀಸ್ ದಾಳಿಗಳು ನಡೆಯೋದ್ರಿಂದ ವ್ಯವಹಾರಕ್ಕೆ ಅಡ್ಡಿಯುಂಟಾಗುವ ಹಿನ್ನಲೆಯಲ್ಲಿ ಬಾರ್ ಮಾಲೀಕರು ಬಾರ್ ಒಳಗೆ ಮಹಿಳೆಯರು ಮತ್ತು ಮಕ್ಕಳ ಪ್ರವೇಶವನ್ನು ನಿಷೇಧಿಸಿದ್ದಾರೆ. ಮಾಲ್ ಗಳು ಕೂಡ ಮುಂಜಾಗ್ರತಾ ದೃಷ್ಟಿಯಿಂದ ಮಾಲ್ ಗೆ ಬರುವವರ ಮೇಲೆ ನಿಗಾ ಇಡೋದಕ್ಕೆ ನಿರ್ಧರಿಸಿದೆ. ಮಾಲ್ ಒಳಗೆ ಬರುವ ಪ್ರತಿಯೊಬ್ಬರನ್ನು ಬಯೋಮೆಟ್ರಿಕ್ ಮೂಲಕ ಮಾಲ್ ಪ್ರವೇಶಿಸುವಂತೆ ನೋಡಿಕೊಳ್ಳಲಾಗ್ತಿದೆ. ಒಂದು ಬಾರಿ ಬಯೋಮೆಟ್ರಿಕ್ ಸೇವೆಯನ್ನ ಪಡೆದ್ರೆ ಅದರ ಕಾಲಾವಧಿ ಮೂರು ದಿನಗಳಿಗೆ ಮೀಸಲಾಗಿರಲಿದೆ.

ಮಾಲ್ ಪ್ರವೇಶಿಸ ಬಯಸುವವರು ತಮ್ಮ ವಯಸ್ಸಿನ ದೃಢೀಕರಣದ ಗುರತಿನ ಚೀಟಿ ತೋರಿಸಿ ಬಯೋಮೆಟ್ರಿಕ್ ಸಿಸ್ಟಮ್ನಲ್ಲಿ ತಮ್ಮ ಗುರತು ನೊಂದಾಯಿಸಿಕೊಳ್ಳಬೇಕಿದೆ. ಮಾಲ್ ನ ಬಗ್ಗೆ ಜನರಿಗೆ ತಪ್ಪು ಅಭಿಪ್ರಾಯ ಬಾರದಂತೆ ತಡೆಯೋಕೆ ಇಂತ ಕ್ರಮಗಳು ಅನಿವಾರ್ಯ ಅಂತ ಮಾಲ್ ನ ನಿರ್ವಹಣಾ ಮಂಡಳಿ ತಿಳಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...