alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದ ಅತಿ ಶ್ರೀಮಂತ ಮಹಿಳೆಯರು ಯಾರು ಗೊತ್ತಾ?

ವಿಶ್ವದ ಕುಬೇರರ ಪಟ್ಟಿ ಬಿಡುಗಡೆಯಾದಾಗಲೆಲ್ಲಾ ಅದರಲ್ಲಿ ಹೆಚ್ಚಿನ ಸ್ಥಾನವನ್ನು ಪುರುಷರೇ ಆವರಿಸಿರುತ್ತಾರೆ. ಆದ್ರೆ ಭಾರತದ ಮಟ್ಟಿಗೆ ಅನೇಕ ಮಹಿಳಾ ಸಾಧಕಿಯರು ಮಲ್ಟಿ ಮಿಲಿಯನೇರ್ಸ್ ಮತ್ತು ಬಿಲಿಯನೇರ್ಸ್ ಆಗಿದ್ದಾರೆ ಅನ್ನೋದು ಕೂಡ ಹೆಮ್ಮೆಯ ಸಂಗತಿ. ಸ್ವಯಂಕೃಷಿಯಿಂದ ಮೇಲೆ ಬಂದ ಭಾರತದ ಬಿಲಿಯನೇರ್ಸ್ ಮಹಿಳೆಯರು ಯಾರು ಅನ್ನೋದನ್ನ ನೋಡಿದ್ರೆ ನೀವು ಕೂಡ ಆಶ್ಚರ್ಯ ಪಡ್ತೀರಿ.

ಈ ಪಟ್ಟಿಯಲ್ಲಿ ಮೊದಲು ಕಾಣಿಸಿಕೊಳ್ಳೋ ಹೆಸರೇ ಸಾವಿತ್ರಿ ಜಿಂದಾಲ್ ಅವರದ್ದು. ಜಿಂದಾಲ್ ಸ್ಟೀಲ್ ಮತ್ತು ಪವರ್ ಲಿಮಿಟೆಡ್ ನ ಗೌರವ ಚೇರ್ ಮನ್ ಆಗಿರುವ ಸಾವಿತ್ರಿ ಜಿಂದಾಲ್ 7.7 ಬಿಲಿಯನ್ ಆಸ್ತಿಗೆ ಒಡತಿಯಾಗಿದ್ದಾರೆ. ಅಂದ್ರೆ 53,048 ಕೋಟಿ ರೂಪಾಯಿ ಅವರ ಖಜಾನೆಯಲ್ಲಿದೆ.

ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಹೆಸರು ಬೆಂಗಳೂರು ಮೂಲದ ಬಯೋಕಾನ್ ಸಂಸ್ಥೆಯ ಅಧ್ಯಕ್ಷೆ ಕಿರಣ್ ಮಜುಮ್ದಾರ್ ಷಾ ಅವರದ್ದು. ಇತ್ತೀಚಿನ ಫೋರ್ಬ್ ಪಟ್ಟಿಯಲ್ಲಿ 629 ನೇ ಸ್ಥಾನ ಪಡೆದಿರುವ ಕಿರಣ್ ಮಜುಮ್ದಾರ್ ಷಾ ಟೈಮ್ಸ್ ಮ್ಯಾಗಜೀನ್ ಪಟ್ಟಿಯಲ್ಲೂ ಸ್ಥಾನ ಪಡೆದಿದ್ದಾರೆ. ಕಿರಣ್ ಮಜುಮ್ದಾರ್ ಷಾ ಅವರು ಭಾರತದ ಎರಡನೇ ಬಿಲಿನೇರ್ಸ್ ಆಸ್ತಿ ಒಡೆತನದ ಮಹಿಳೆ ಅನ್ನೋ ಗೌರವಕ್ಕೆ ಪಾತ್ರರಾಗಿದ್ದಾರೆ. ಕಿರಣ್ ಮಜುಮ್ದಾರ್ ಷಾ 3.29 ಬಿಲಿಯನ್ ಆಸ್ತಿಗೆ ಹಕ್ಕುದಾರರಾಗಿದ್ದಾರೆ.

ಪಟ್ಟಿಯ ಮೂರನೇ ಸ್ಥಾನದಲ್ಲಿರೋದು ಸ್ಮಿತಾ ಕೃಷ್ಣ ಗೋದ್ರೇಜ್. ಗೋದ್ರೇಜ್ ಕಂಪನಿಯಲ್ಲಿ ಐದನೇ ಒಂದು ಭಾಗದಷ್ಟು ಆಸ್ತಿ ಹೊಂದಿರುವ ಸ್ಮಿತಾ ಕೃಷ್ಣ 3 ಬಿಲಿಯನ್ ಆಸ್ತಿಗೆ ಮಾಲೀಕರಾಗಿದ್ದಾರೆ. 2018 ರ ಫೋರ್ಬ್ ಪಟ್ಟಿಯಲ್ಲಿ ಅವರು 822 ನೇ ಸ್ಥಾನದಲ್ಲಿದ್ದಾರೆ.

ಯುಎಸ್ವಿ ಇಂಡಿಯಾದ ಮೂಲಕ ಭಾರತದ ವ್ಯಾಪಾರಿ ವಲಯದಲ್ಲಿ ತಮ್ಮದೇ ಛಾಪನ್ನು ಮೂಡಿಸಿರುವ ಲೀನಾ ತಿವಾರಿ ಬಿಲಿಯನೇರ್ಸ್ ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅಲ್ಲದೇ ಭಾರತದ ಅತಿ ಶ್ರಿಮಂತ ಮಹಿಳೆಯರಲ್ಲಿ ಒಬ್ಬರಾಗಿದ್ದಾರೆ. 2.2 ಬಿಲಿಯನ್ ಆಸ್ತಿಗೆ ಅವರು ಹಕ್ಕುದಾರಾಗಿದ್ದಾರೆ.

ಭಾರತದ ಬಿಲಿಯನೇರ್ಸ್ ಗಳ ಪಟ್ಟಿಯ ಐದನೇ ಮತ್ತು ಕೊನೆಯ ಸ್ಥಾನದಲ್ಲಿರೋರು ವಿನೋದಾ ಗುಪ್ತಾ. ತಮ್ಮ ಪುತ್ರ ಅನಿಲ್ ರೈ ಜೊತೆಗೆ 2.7 ಬಿಲಿಯನ್ ಆಸ್ತಿ ಒಡೆತನದ ಪಾಲು ಹೊಂದಿದ್ದಾರೆ. ಫೋರ್ಬ್ ಪಟ್ಟಿಯಲ್ಲಿ ಹ್ಯಾವೆಲ್ಸ್ ಇಂಡಿಯಾದ ಮೂಲಕ ಅವರು ಭಾರತದ ವಾಣಿಜ್ಯ ರಂಗದಲ್ಲಿ ಖ್ಯಾತನಾಮರಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...