alex Certify
ಕನ್ನಡ ದುನಿಯಾ       Mobile App
       

Kannada Duniya

‘ರೇಷನ್’ ಅಂಗಡಿಯಲ್ಲಾಗಲಿದೆ ದೊಡ್ಡ ಬದಲಾವಣೆ

ರೇಷನ್ ಅಂಗಡಿಯಲ್ಲಿ ಬಹು ದೊಡ್ಡ ಬದಲಾವಣೆಯಾಗ್ತಿದೆ. ಇದ್ರಿಂದ ರೇಷನ್ ಕಾರ್ಡ್ ದಾರರಿಗೆ ಲಾಭವಾದ್ರೆ ಕಾಳಸಂತೆ ಮೇಲೆ ನಿಯಂತ್ರಣ ಬೀಳಲಿದೆ.

ರೇಷನ್ ಅಂಗಡಿಯಲ್ಲಿ ಬೆರಳಚ್ಚು ಕಡ್ಡಾಯವಾಗಲಿದೆ. ಫೆಬ್ರವರಿ 9 ರಿಂದ ಈ ಯೋಜನೆ ಜಾರಿಗೆ ಬರಲಿದೆ. ರೇಷನ್ ಕಾರ್ಡ್ ತೋರಿಸಿದ್ರೆ ಸಾಕಾಗಲ್ಲ. ಪಡಿತರ ಪಡೆಯಲು ಅಭ್ಯರ್ಥಿಯ ಬೆರಳಚ್ಚು ಬೇಕಾಗುತ್ತದೆ. ಡೆಹ್ರಾಡೂನ್ ಜಿಲ್ಲೆಯ 1043 ರೇಷನ್ ಅಂಗಡಿಯಲ್ಲಿ ಈ ಯೋಜನೆ ಜಾರಿಗೆ ಬರ್ತಿದೆ.

ಪಡಿತರ ಅಂಗಡಿಗಳಿಗೆ ಬಯೋಮೆಟ್ರಿಕ್ ಯಂತ್ರವನ್ನು ನೀಡಲಾಗ್ತಿದೆ. ಫೆಬ್ರವರಿ 9ರೊಳಗೆ ಎಲ್ಲ ಅಂಗಡಿಗಳಿಗೂ ಬಯೋಮೆಟ್ರಿಕ್ ಯಂತ್ರ ಲಭ್ಯವಾಗಲಿದೆ. ರೇಷನ್ ವಿತರಣೆ ವೇಳೆ ಮೋಸವಾಗ್ತಿದೆ. ಕಾಳ ಸಂತೆಯಲ್ಲಿ ಪಡಿತರ ಮಾರಾಟವಾಗ್ತಿದೆ ಎಂಬ ಸುದ್ದಿಯಿತ್ತು. ಈ ಬಗ್ಗೆ ಅನೇಕ ದೂರುಗಳು ಕೇಳಿ ಬಂದಿದ್ದವು. ಪಡಿತರ ಅಕ್ರಮ ತಡೆಯಲು ಸ್ಥಳೀಯ ಸರ್ಕಾರ ಈ ಕ್ರಮ ಕೈಗೊಂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...