alex Certify
ಕನ್ನಡ ದುನಿಯಾ       Mobile App
       

Kannada Duniya

ಒಂದು ವಾರದಲ್ಲಿ ಇಷ್ಟೆಲ್ಲ ಬದಲಾಯ್ತು ಬಂಗಾರದ ಬೆಲೆ

ಒಂದು ವಾರದ ಹಿಂದೆ ಬಂಗಾರ ಖರೀದಿ ಮಾಡಿದ್ದರೆ ಈಗ 650 ರೂಪಾಯಿ ಲಾಭ ಪಡೆಯಬಹುದಿತ್ತು. ಒಂದೇ ಒಂದು ಬಾರದಲ್ಲಿ ಬಂಗಾರದ ಬೆಲೆ 650 ರೂಪಾಯಿ ಏರಿಕೆ ಕಂಡಿದೆ. ಸಕಾರಾತ್ಮಕ ಜಾಗತಿಕ ಸೂಚ್ಯಂಕ ಹಾಗೂ ಸ್ಥಳೀಯ ಆಭರಣ ತಯಾರಕರಲ್ಲಿ ಹೆಚ್ಚಾದ ಬಂಗಾರದ ಬೇಡಿಕೆ ಇದಕ್ಕೆ ಕಾರಣ.

ಒಂದು ವಾರದಲ್ಲಿ ದೆಹಲಿ ಆಭರಣ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಒಟ್ಟು 650 ರೂಪಾಯಿ ಏರಿಕೆಯಾಗಿ ಪ್ರತಿ 10 ಗ್ರಾಂ ಚಿನ್ನದ ಬೆಲೆ 30,900 ರೂಪಾಯಿಯಾಗಿದೆ. ನಾಣ್ಯ ತಯಾರಕ ಕಂಪನಿಗಳಲ್ಲಿ ಬೇಡಿಕೆ ಹೆಚ್ಚಾಗಿದ್ದರಿಂದ ಬೆಳ್ಳಿ ಬೆಲೆಯಲ್ಲಿ ಕೂಡ ಏರಿಕೆ ಕಂಡು ಬಂದಿದೆ. ರೂಪಾಯಿ ಮೌಲ್ಯದಲ್ಲಾದ ಬದಲಾವಣೆಯಿಂದ ಷೇರು ಮಾರಾಟದಾರರು ಬಂಗಾರ ಖರೀದಿಯತ್ತ ಮುಖ ಮಾಡಿದ್ದಾರೆ. ಇದೇ ಕಾರಣಕ್ಕೆ ಬಂಗಾರದ ಬೇಡಿಕೆ ಹೆಚ್ಚಾಗಿ ಬೆಲೆಯಲ್ಲೂ ಏರಿಕೆ ಕಂಡು ಬಂದಿದೆ.

ಅಂತರಾಷ್ಟ್ರೀಯ ಮಾರುಕಟ್ಟೆ ನ್ಯೂಯಾರ್ಕ್ ನಲ್ಲಿ ಒಂದು ವಾರದಲ್ಲಿ ಬಂಗಾರದ ಬೆಲೆ ಪ್ರತಿ ಔನ್ಸ್ ಗೆ 1,205.30 ಡಾಲರ್ ಆಗಿದ್ದು, ಬೆಳ್ಳಿ ಬೆಲೆ ಪ್ರತಿ ಔನ್ಸ್ ಗೆ 14.77 ಡಾಲರ್ ಆಗಿತ್ತು. ದೆಹಲಿಯಲ್ಲಿ ಶೇಕಡಾ 99.9 ರಷ್ಟು ಶುದ್ಧ ಹಾಗೂ ಶೇಕಡಾ 99.5ರಷ್ಟು ಶುದ್ಧ ಬಂಗಾರದ ಬೆಲೆ ವಾರದಲ್ಲಿ 650 ರೂಪಾಯಿ ಏರಿಕೆಯಾಗಿ 30,900 ಹಾಗೂ 30,750 ರೂಪಾಯಿಗೆ ಬಂದು ನಿಂತಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...