alex Certify
ಕನ್ನಡ ದುನಿಯಾ       Mobile App
       

Kannada Duniya

ಸಹೋದರನ ನೆರವಿಗೆ ಧಾವಿಸಿದ ಮುಕೇಶ್ ಅಂಬಾನಿ

ದೇಶದ ಅತಿ ದೊಡ್ಡ ಸಿರಿವಂತ ಉದ್ಯಮಿ ಮುಕೇಶ್ ಅಂಬಾನಿಯವರ ರಿಲಯನ್ಸ್, ಟೆಲಿಕಾಂ ಕ್ಷೇತ್ರಕ್ಕೆ ಕಾಲಿರಿಸುತ್ತಿದ್ದಂತೆಯೇ ಈ ಉದ್ಯಮದಲ್ಲಿ ಇಲ್ಲಿಯವರೆಗೆ ಪಾರಮ್ಯ ಸ್ಥಾಪಿಸಿದ್ದ ಕಂಪನಿಗಳು ತತ್ತರಿಸಿ ಹೋಗಿವೆ.

ರಿಲಯನ್ಸ್ ಜಿಯೋ ಗೆ ಪೈಪೋಟಿ ನೀಡಲು ಬಿ.ಎಸ್.ಎನ್.ಎಲ್., ಏರ್ಟೆಲ್, ಐಡಿಯಾ, ವೋಡಾಫೋನ್ ಸೇರಿದಂತೆ ಹಲವು ಕಂಪನಿಗಳು ಭಾರೀ ದರ ಸಮರ ನಡೆಸುತ್ತಿದ್ದು, ಇದರ ಲಾಭ ಗ್ರಾಹಕರಿಗಾಗುತ್ತಿದೆ.

ಈ ಮಧ್ಯೆ ರಿಲಯನ್ಸ್ ಜಿಯೋ ದರ ಸಮರದ ಪರಿಣಾಮ ಮುಕೇಶ್ ಆಂಬಾನಿಯವರ ಸಹೋದರ ಅನಿಲ್ ಅಂಬಾನಿಯವರ ರಿಲಯನ್ಸ್ ಕಮ್ಯುನಿಕೇಷನ್ಸ್ RCom ಮೇಲೂ ಪರಿಣಾಮ ಬೀರಿದ್ದು, ಈಗಾಗಲೇ ಸಾಲದ ಸುಳಿಯಲ್ಲಿ ಸಿಲುಕಿದ್ದ ಕಂಪನಿ RCom ಮಾರಾಟ ಮಾಡಲು ಮುಂದಾಗಿತ್ತು.

ಇದೀಗ ಮುಕೇಶ್ ಅಂಬಾನಿಯವರ ಜಿಯೋ, ಅನಿಲ್ ಅಂಬಾನಿಯವರ ರಿಲಯನ್ಸ್ ಕಮ್ಯುನಿಕೇಷನ್ಸ್ ಖರೀದಿಗೆ ಮುಂದಾಗಿದ್ದು, ಇದರ ಪ್ರಕ್ರಿಯೆಗಳು ನಡೆದಿವೆ ಎನ್ನಲಾಗಿದೆ. ರಿಲಯನ್ಸ್ ಕಮ್ಯುನಿಕೇಷನ್ಸ್ ಸುಮಾರು 45 ಸಾವಿರ ಕೋಟಿ ರೂ. ಸಾಲದ ಸುಳಿಗೆ ಸಿಲುಕಿದ್ದು, ಈಗ ಸಮಸ್ಯೆ ಬಗೆಹರಿಯಲಿದೆ ಎನ್ನಲಾಗಿದೆ. ಈ ಮಧ್ಯೆ ಜಿಯೋ ಹಾಗೂ ರಿಲಯನ್ಸ್ ಕಮ್ಯುನಿಕೇಷನ್ಸ್ ಒಗ್ಗೂಡಿರುವ ಪರಿಣಾಮ ಟೆಲಿಕಾಂ ಕ್ಷೇತ್ರದಲ್ಲಿ ಜಿಯೋ ಮತ್ತಷ್ಟು ಪ್ರಭುತ್ವ ಸಾಧಿಸಲಿದೆ ಎಂದು ಉದ್ಯಮ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...