alex Certify
ಕನ್ನಡ ದುನಿಯಾ       Mobile App
       

Kannada Duniya

ಭೀಮ್ ಆಪ್ ಬಳಕೆದಾರರಿಗೆ ಸಿಗ್ತಿದೆ ಕ್ಯಾಶ್ ಬ್ಯಾಕ್ ಆಫರ್

ಭೀಮ್ ಆ್ಯಪ್ ಬಳಕೆದಾರರಿಗೊಂದು ಖುಷಿ ಸುದ್ದಿ. ಏಪ್ರಿಲ್ 14 ಅಂದ್ರೆ ಅಂಬೇಡ್ಕರ್ ಜಯಂತಿಯಿಂದ ಗ್ರಾಹಕರಿಗೆ ಕ್ಯಾಶ್ ಬ್ಯಾಕ್ ಆಫರ್ ಸಿಗ್ತಿದೆ. ಬಾಬಾ ಸಾಹೇಬ್ ಭೀಮ್ ರಾವ್ ರಾಮ್ ಜಿ ಅಂಬೇಡ್ಕರ್ ಅವರಿಗೆ ಅರ್ಪಿಸಲಾಗಿರುವ ಭೀಮ್ ಆ್ಯಪ್ ನಲ್ಲಿ ಶನಿವಾರದಿಂದ ಬಳಕೆದಾರರಿಗೆ ಕ್ಯಾಶ್ ಬ್ಯಾಕ್ ಸಿಗಲಿದೆ.

ಭೀಮ್ ಆ್ಯಪ್ ಕ್ಯಾಶ್ಬ್ಯಾಕ್ ಆಫರ್ ನಲ್ಲಿ ಗ್ರಾಹಕರಿಗೆ ತಿಂಗಳಿಗೆ 750 ರೂಪಾಯಿ ಹಾಗೂ ವ್ಯಾಪಾರಿಗಳಿಗೆ 1 ಸಾವಿರ ರೂಪಾಯಿಯವರೆಗೆ ಕ್ಯಾಶ್ ಬ್ಯಾಕ್ ಸಿಗಲಿದೆ. ನ್ಯಾಷನಲ್ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ ಭೀಮ್ ಆ್ಯಪ್ ನಡೆಸುತ್ತದೆ. ಭೀಮ್ ಆ್ಯಪ್ ತುಂಬಾ ಸರಳವಾಗಿರುವುದೇ ಅದ್ರ ವಿಶೇಷ. 2 ಎಂಬಿ ಮಾತ್ರ ಹೊಂದಿರುವ ಆ್ಯಪನ್ನು ಕೆಲವೇ ಸೆಕೆಂಡ್ ನಲ್ಲಿ ಆಂಡ್ರಾಯ್ಡ್ ಫೋನ್ ನಲ್ಲಿ ಡೌನ್ಲೋಡ್ ಮಾಡಬಹುದಾಗಿದೆ.

ನಿಮ್ಮ ಮೊಬೈಲ್ ನಂಬರ್ ನಿಮ್ಮ ಬ್ಯಾಂಕ್ ಅಕೌಂಟ್ ಜೊತೆ ಲಿಂಕ್ ಆಗಿದ್ದರೆ ಸಾಕು. ನೀವು ಸುಲಭವಾಗಿ ಭೀಮ್ ಆ್ಯಪ್ ಬಳಸಬಹುದಾಗಿದೆ. ಗೂಗಲ್ ಪ್ಲೇ ಸ್ಟೋರ್ ನಲ್ಲಿ ಇದನ್ನು ಡೌನ್ಲೋಡ್ ಮಾಡಿದ ಮೇಲೆ ಮೊದಲ ಬಾರಿ ಬಳಕೆಗೆ ನಿಮ್ಮ ಬಳಿ ಡೆಬಿಟ್ ಕಾರ್ಡ್ ಬೇಕಾಗುತ್ತದೆ. ಹಣಕಾಸಿನ ವ್ಯವಹಾರಕ್ಕೆ ಇದು ಸುಲಭ ಆ್ಯಪ್ ಆಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...