alex Certify
ಕನ್ನಡ ದುನಿಯಾ       Mobile App
       

Kannada Duniya

ಏರ್ಟೆಲ್ ನ ಈ ಪ್ಲಾನ್ ನಲ್ಲಿ ಪ್ರತಿದಿನ ಸಿಗಲಿದೆ 3ಜಿಬಿ ಡೇಟಾ

ಏರ್ಟೆಲ್ ಕಂಪನಿ ರಿಲಾಯನ್ಸ್ ಜಿಯೋ ಹಿಂದಿಕ್ಕಿ ಟೆಲಿಕಾಂ ಕ್ಷೇತ್ರದಲ್ಲಿ ನಂಬರ್ 1 ಸ್ಥಾನಕ್ಕೇರಲು ಪ್ರಯತ್ನಿಸುತ್ತಿದೆ. ಇದೇ ನಿಟ್ಟಿನಲ್ಲಿ ಪ್ರತಿ ತಿಂಗಳು ಹೊಸ ಹೊಸ ಆಪರ್ ಗಳನ್ನು ತರ್ತಾಯಿದೆ. ಈ ತಿಂಗಳ ಕೂಡ ತನ್ನ ಅನಿಯಮಿತ ಕಾಂಬೊ ಯೋಜನೆಯಲ್ಲಿ ಬದಲಾವಣೆ ತಂದಿದೆ. 349 ಹಾಗೂ 549 ರೂಪಾಯಿ ಪ್ಲಾನ್ ನಲ್ಲಿ ಬದಲಾವಣೆ ತಂದಿದೆ.

ಏರ್ಟೆಲ್ ಬಳಿ 199, 349, 448, 549, 799 ರೂಪಾಯಿ ಮುಕ್ತ ಮಾರುಕಟ್ಟೆ ಸುಂಕದ ಯೋಜನೆಗಳಿವೆ. ಮೂಲಗಳ ಪ್ರಕಾರ ಕಂಪನಿ ಈ ಬಾರಿ 349 ಹಾಗೂ 549 ರೂಪಾಯಿ ಪ್ಲಾನ್ ನಲ್ಲಿ ಭಾರೀ ಬದಲಾವಣೆ ತಂದಿದೆ. 349 ರೂ. ಪ್ಲಾನ್ ನಲ್ಲಿ ಇನ್ಮುಂದೆ ಗ್ರಾಹಕರಿಗೆ ಪ್ರತಿದಿನ 2ಜಿಬಿ ಡೇಟಾ ಲಭ್ಯವಾಗಲಿದೆ. ಈವರೆಗೆ 1.5 ಜಿಬಿ ಡೇಟಾ ಗ್ರಾಹಕರಿಗೆ ದೊರಕುತ್ತಿತ್ತು. ಈ ಪ್ಲಾನ್ ನಲ್ಲಿ ಗ್ರಾಹಕರಿಗೆ ಒಟ್ಟೂ 56ಜಿಬಿ ಡೇಟಾ ಸಿಗಲಿದೆ.

549 ರೂ. ಪ್ಲಾನ್ ನಲ್ಲಿ 2.5 ಜಿಬಿ ಡೇಟಾ ಬದಲು ಪ್ರತಿದಿನ 3ಜಿಬಿ ಡೇಟಾ ಸಿಗಲಿದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಒಟ್ಟೂ 84 ಜಿಬಿ ಡೇಟಾ ಸಿಗಲಿದೆ. ಈ ಎರಡೂ ಪ್ಲಾನ್ ವ್ಯಾಲಿಟಿಡಿ 28 ದಿನಗಳಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...