alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಯೋಗೆ ಟಕ್ಕರ್ ನೀಡಲು ಬದಲಾಯ್ತು ಏರ್ಟೆಲ್ ಪ್ಲಾನ್

ರಿಲಾಯನ್ಸ್ ಜಿಯೋ 98 ರೂಪಾಯಿ ಪ್ಲಾನ್ ಗೆ ಟಕ್ಕರ್ ನೀಡಲು ಏರ್ಟೆಲ್ ಗ್ರಾಹಕರಿಗೆ ಹೊಸ ಆಫರ್ ಪರಿಚಯಿಸಿದೆ. ಏರ್ಟೆಲ್ ತನ್ನ 93 ರೂಪಾಯಿ ಪ್ಲಾನ್ ನಲ್ಲಿ ಕೆಲ ಬದಲಾವಣೆ ಮಾಡಿದೆ. ಈ ಪ್ಲಾನ್ ನಲ್ಲಿ ಗ್ರಾಹಕರಿಗೆ 28 ದಿನಗಳ ಕಾಲ ಅನಿಯಮಿತ ಲೋಕಲ್ ಹಾಗೂ ಎಸ್ ಟಿ ಡಿ ಕರೆ ಲಭ್ಯವಾಗಲಿದೆ.

ಅನಿಯಮಿತ ರೋಮಿಂಗ್ ಕಾಲ್ ಜೊತೆ ಪ್ರತಿದಿನ 100 ಎಸ್ಎಂಎಸ್ ಉಚಿತವಾಗಿ ಸಿಗಲಿದೆ. ಈ ಪ್ಲಾನ್ ರಿಚಾರ್ಜ್ ಮಾಡಿದ ಗ್ರಾಹಕರು ಪ್ರತಿದಿನ 1ಜಿಬಿ ಡೇಟಾ ಪಡೆಯಬಹುದಾಗಿದೆ. ಈ ಹಿಂದೆ ಏರ್ಟೆಲ್ ನ ಈ ಪ್ಲಾನ್ ಸಿಂಧುತ್ವ 10 ದಿನ ಮಾತ್ರ ಇತ್ತು. ಈಗ 28 ದಿನವಾಗಿದೆ. ತೆಲಂಗಾಣ, ಆಂಧ್ರಪ್ರದೇಶ ಗ್ರಾಹಕರಿಗೆ ಈ ಪ್ಲಾನ್ ಲಭ್ಯವಿದೆ.

ಏರ್ಟೆಲ್, ಜಿಯೋಗೆ ಟಕ್ಕರ್ ನೀಡಲು ಈ ಪ್ಲಾನ್ ನಲ್ಲಿ ಬದಲಾವಣೆ ಮಾಡಿದೆ. ಜಿಯೋ 98 ರೂಪಾಯಿ ಪ್ಲಾನ್ ನಲ್ಲಿ ಗ್ರಾಹಕರಿಗೆ 2ಜಿಬಿ ಡೇಟಾ ಹಾಗೂ ಅನಿಯಮಿತ ವಾಯ್ಸ್ ಕಾಲ್ ಸೌಲಭ್ಯ ನೀಡ್ತಿದೆ. ಡೇಟಾ ವಿಚಾರದಲ್ಲಿ ಈಗ್ಲೂ ಜಿಯೋ ಮುಂದಿದೆ. ಆದ್ರೆ ಎಸ್ಎಂಎಸ್ ವಿಚಾರದಲ್ಲಿ ಏರ್ಟೆಲ್ ಮುಂದಿದೆ. ಜಿಯೋ 98 ರೂಪಾಯಿ ಪ್ಲಾನ್ ನಲ್ಲಿ 300 ಎಸ್ಎಂಎಸ್ ಉಚಿತವಾಗಿ ನೀಡ್ತಿದ್ದರೆ ಏರ್ಟೆಲ್ 2800 ಎಸ್ಎಂಎಸ್ ನೀಡ್ತಿದೆ.

 

 

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...