alex Certify
ಕನ್ನಡ ದುನಿಯಾ       Mobile App
       

Kannada Duniya

15 ವರ್ಷಗಳ ನಂತ್ರ ನಂಬರ್ 1 ಸ್ಥಾನ ಕಳೆದುಕೊಂಡ ಏರ್ಟೆಲ್

ಏರ್ಟೆಲ್ ಈಗ ಭಾರತದ ನಂಬರ್ ಒನ್ ಟೆಲಿಕಾಂ ಕಂಪನಿಯಲ್ಲ. ಜಿಯೋ, ಟೆಲಿಕಾಂ ಕ್ಷೇತ್ರಕ್ಕೆ ಕಾಲಿಡ್ತಿದ್ದಂತೆ ಕಂಪನಿಗಳ ಗಳಿಕೆ ಮೇಲೆ ಭಾರೀ ಪ್ರಭಾವ ಬೀರಿದೆ. ಜಿಯೋ ಅಗ್ಗದ ಯೋಜನೆಗಳ ಸ್ಪರ್ಧೆ ಉಳಿದ ಕಂಪನಿಗಳ ಗಳಿಕೆಗೆ ಹಿನ್ನಡೆಯುಂಟು ಮಾಡಿದೆ.

ಇದೇ ಕಾರಣಕ್ಕೆ ಮಾರ್ಚ್ 20,2017 ರಲ್ಲಿ ವೋಡಾಫೋನ್ ಹಾಗೂ ಐಡಿಯಾ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದವು. ಎರಡೂ ಕಂಪನಿಗಳ ಒಂದಾಗುವ ಘೋಷಣೆ ಮಾಡಿದ್ದವು. ಅದಕ್ಕೀಗ ಅಧಿಕೃತ ಒಪ್ಪಿಗೆ ಸಿಗ್ತಿದೆ. ವೋಡಾಫೋನ್ ಹಾಗೂ ಐಡಿಯಾ ಒಂದಾಗ್ತಿದ್ದಂತೆ ಟೆಲಿಕಾಂ ಕ್ಷೇತ್ರದಲ್ಲಿ ಮತ್ತೆ ಸಾಕಷ್ಟು ಬದಲಾವಣೆ ಕಂಡು ಬಂದಿದೆ.

ಐಡಿಯಾ ಷೇರು ದರದಲ್ಲಿ ಏರಿಕೆ ಕಂಡು ಬಂದಿದೆ. ಶುಕ್ರವಾರ ಐಡಿಯಾ ಷೇರಿನಲ್ಲಿ ಶೇಕಡಾ 1.81 ರಷ್ಟು ಹೆಚ್ಚಳ ಕಂಡು ಬಂದಿದೆ. ಷೇರು ಬೆಲೆ 50.75 ರೂಪಾಯಿಯಾಗಿದೆ. ಇತ್ತ ಏರ್ಟೆಲ್ ಷೇರಿನಲ್ಲಿ ಶೇಕಡಾ 0.25 ರಷ್ಟು ಇಳಿಕೆ ಕಂಡು ಬಂದಿದೆ. ಏರ್ಟೆಲ್ ಷೇರಿನ ಬೆಲೆ 382.75 ರೂಪಾಯಿಯಾಗಿದೆ.

ಕಳೆದ 15 ವರ್ಷಗಳಿಂದ ಟೆಲಿಕಾಂ ಕ್ಷೇತ್ರದಲ್ಲಿ ಏರ್ಟೆಲ್ ನಂಬರ್ ಒನ್ ಸ್ಥಾನದಲ್ಲಿತ್ತು. ಆದ್ರೀಗ ಐಡಿಯಾ, ವೋಡಾಫೋನ್ ವಿಲೀನ ಕಂಪನಿ ಮೊದಲ ಸ್ಥಾನಕ್ಕೇರಿದೆ. ಈ ಎರಡೂ ಕಂಪನಿ ಒಂದಾದ ಮೇಲೆ ಒಟ್ಟೂ 44 ಕೋಟಿ ಗ್ರಾಹಕರನ್ನು ಅದು ಹೊಂದಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...