alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಪ್ಲಾನ್ ಮೂಲಕ ಜಿಯೋ ಹಿಂದಿಕ್ಕಿದ ಏರ್ಟೆಲ್

ಏರ್ಟೆಲ್ ತನ್ನ 59 ರೂಪಾಯಿ ಪ್ಲಾನ್ ನಲ್ಲಿ  ಆಕರ್ಷಕ ಬದಲಾವಣೆ ಮಾಡಿದೆ. ಈ 59 ರೂಪಾಯಿ ಪ್ಲಾನ್ ನಲ್ಲಿ ಕಂಪನಿ ಗ್ರಾಹಕರಿಗೆ 27 ದಿನಗಳವರೆಗೆ ಅನಿಯಮಿತ ವೈಸ್ ಕಾಲ್, ರೋಮಿಂಗ್ ಕಾಲ್ ಮತ್ತು 500ಎಂಬಿ ಡೇಟಾ ನೀಡ್ತಿದೆ. ಈವರೆಗೆ ಯಾವುದೇ ಟೆಲಿಕಾಂ ಕಂಪನಿ ಇಷ್ಟು ಕಡಿಮೆ ಬೆಲೆಗೆ 27 ದಿನಗಳವರೆಗೆ ಇಂಥ ಆಫರ್ ನೀಡಿಲ್ಲ.

ಕೋಲ್ಕತ್ತಾದ ಪ್ರಿಪೇಯ್ಡ್ ಗ್ರಾಹಕರಿಗೆ ಕಂಪನಿ ಈ ಆಫರ್ ನೀಡ್ತಿದೆ. ಶೀಘ್ರದಲ್ಲಿಯೇ ಈ ಯೋಜನೆಯನ್ನು ಕಂಪನಿ ಬೇರೆ ನಗರಗಳಿಗೆ ವಿಸ್ತರಿಸುವ ಸಾಧ್ಯತೆಯಿದೆ. ಇತರ ಪ್ರದೇಶಗಳಲ್ಲಿ ಕಂಪನಿಯ 59 ರೂಪಾಯಿ ಈ ಪ್ಲಾನ್ ನಲ್ಲಿ ಅನಿಯಮಿತ ಕರೆ, ರೋಮಿಂಗ್ ಕಾಲ್, ಪ್ರತಿದಿನ 100 ಎಸ್ ಎಂ ಎಸ್ ಹಾಗೂ 500 ಎಂಬಿ ಡೇಟಾ ಸಿಗಲಿದೆ. ಆದ್ರೆ ಇದರ ಸಿಂಧುತ್ವ 7 ದಿನಗಳವರೆಗೆ ಮಾತ್ರ.

ಕೋಲ್ಕತ್ತಾ ಗ್ರಾಹಕರಿಗೆ ಈ ಪ್ಲಾನ್ ನಲ್ಲಿ ವೈಸ್ ಕಾಲಿಂಗ್ ಸೌಲಭ್ಯ ಕೂಡ ಸಿಗಲಿದೆ. ಈ ಪ್ಲಾನ್ ಮೂಲಕ ಏರ್ಟೆಲ್ ಜಿಯೋವನ್ನು ಹಿಂದಿಕ್ಕಿದೆ. ಜಿಯೋ 52 ರೂಪಾಯಿ ಪ್ಲಾನ್ ನಲ್ಲಿ 150 ಎಂಬಿ ಡೇಟಾ, ದಿನಕ್ಕೆ 70 ಎಸ್ ಎಂ ಎಸ್ ಹಾಗೂ ಅನಿಯಮಿತ ವೈಸ್ ಕಾಲ್ ನೀಡ್ತಿದೆ. ಆದ್ರೆ ಇದ್ರ ಸಿಂಧುತ್ವ 7 ದಿನ ಮಾತ್ರ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...