alex Certify
ಕನ್ನಡ ದುನಿಯಾ       Mobile App
       

Kannada Duniya

ಏರ್ಟೆಲ್ ನ ಈ ಪ್ಲಾನ್ ನಲ್ಲಿ ಗ್ರಾಹಕರಿಗೆ ಸಿಗಲಿದೆ 105 ಜಿಬಿ ಡೇಟಾ

ಟೆಲಿಕಾಂ ಕ್ಷೇತ್ರದಲ್ಲಿ ನಡೆದಿರುವ ಬೆಲೆ ಯುದ್ಧದ ಮಧ್ಯೆ ಏರ್ಟೆಲ್, ಗ್ರಾಹಕರಿಗಾಗಿ ಹೊಸ ಪ್ರಿಪೇಡ್ ಪ್ಲಾನ್ ಶುರು ಮಾಡಿದೆ. 419 ರೂಪಾಯಿ ಹೊಸ ಪ್ಲಾನ್ ನಲ್ಲಿ ಗ್ರಾಹಕರಿಗೆ 1.4 ಜಿಬಿ ಡೇಟಾ ಪ್ರತಿದಿನ ಸಿಗಲಿದೆ. 419 ರೂಪಾಯಿ ಈ ಪ್ಲಾನ್ ಏರ್ಟೆಲ್ ನ 199 ರೂ., 219 ರೂ. ಹಾಗೂ 399 ರೂ. ಮತ್ತು 509 ರೂಪಾಯಿ ಪ್ಲಾನ್ ಜೊತೆ ಗ್ರಾಹಕರಿಗೆ ಸಿಗಲಿದೆ.

ಏರ್ಟೆಲ್ ನ 419 ರೂಪಾಯಿ ಪ್ಲಾನ್ 75 ದಿನಗಳ ಸಿಂಧುತ್ವ ಹೊಂದಿರಲಿದೆ. ಗ್ರಾಹಕರು ಉಚಿತ ಕರೆ ಲಾಭ ಪಡೆಯಲಿದ್ದಾರೆ. ಪ್ರತಿ ದಿನ 1.4 ಜಿಬಿ ಡೇಟಾ ಜೊತೆ 100 ಎಸ್ಎಂಎಸ್ ಸಿಗಲಿದೆ. 75 ದಿನಗಳ ಕಾಲ ಗ್ರಾಹಕರಿಗೆ 105 ಜಿಬಿ ಡೇಟಾ ಸಿಗಲಿದೆ.

ಗ್ರಾಹಕರಿರುವ ಸ್ಥಳದಲ್ಲಿ 4ಜಿ ನೆಟ್ವರ್ಕ್ ಇಲ್ಲವಾದ್ರೆ ಗ್ರಾಹಕರು 3ಜಿ ಅಥವಾ 2ಜಿ ನೆಟ್ವರ್ಕ್ ನಲ್ಲಿ ಕೂಡ ಇದ್ರ ಸೇವೆ ಪಡೆಯಬಹುದಾಗಿದೆ. ಕಂಪನಿ ಬಳಿ 399 ರೂಪಾಯಿ ಪ್ಲಾನ್ ಕೂಡ ಇದೆ. ಈ ಪ್ಲಾನ್ ನಲ್ಲಿ 419 ರೂಪಾಯಿ ಪ್ಲಾನ್ ನಲ್ಲಿ ಸಿಗುವ ಎಲ್ಲ ಸೌಲಭ್ಯ ಸಿಗಲಿದೆ. ಆದ್ರೆ ಪ್ಲಾನ್ 70 ದಿನಗಳ ಸಿಂಧುತ್ವ ಹೊಂದಿರಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...