alex Certify
ಕನ್ನಡ ದುನಿಯಾ       Mobile App
       

Kannada Duniya

ದೀಪಾವಳಿಗೆ ಸ್ಮಾರ್ಟ್ ಫೋನ್ ಮೇಲೆ ಭರ್ಜರಿ ಆಫರ್

ದೀಪಾವಳಿ ಹಬ್ಬ ಹತ್ತಿರ ಬರ್ತಿರೋದ್ರಿಂದ ಫ್ಲಿಪ್ಕಾರ್ಟ್, ಅಮೆಜಾನ್ ಸೇರಿದಂತೆ ವಿವಿಧ ಆನ್ ಲೈನ್ ಪೋರ್ಟಲ್ ಗಳು ಸ್ಮಾರ್ಟ್ ಫೋನ್ ಗಳ ಮೇಲೆ ಭರ್ಜರಿ ಆಫರ್ ನೀಡ್ತಿವೆ. ಕ್ಯಾಶ್ ಬ್ಯಾಕ್, ಡಿಸ್ಕೌಂಟ್, ಎಕ್ಸ್ ಚೇಂಜ್ ಹೀಗೆ ಆಫರ್ ಗಳ ಧಮಾಕಾ ಶುರುವಾಗಿದೆ.

ಇವತ್ತಿನಿಂದ ಫ್ಲಿಪ್ಕಾರ್ಟ್ ಹಾಗೂ ಅಮೆಜಾನ್ ನಲ್ಲಿ ಫೆಸ್ಟಿವ್ ಸೇಲ್ ಇದೆ. ನೀವು ಕೂಡ ಮೊಬೈಲ್ ಖರೀದಿ ಮಾಡುವ ಆಲೋಚನೆಯಲ್ಲಿದ್ರೆ, 15,000 ರೂಪಾಯಿ ಒಳಗೆ ಹತ್ತಾರು ಸ್ಮಾರ್ಟ್ ಫೋನ್ ಗಳು ಲಭ್ಯವಿವೆ. ಅದರಲ್ಲಿ ಯಾವುದು ಬೆಸ್ಟ್ ಅಂತಾ ನೀವೇ ಆಯ್ಕೆ ಮಾಡ್ಕೊಳ್ಳಿ.

ಕ್ಸಿಯೋಮಿ ರೆಡ್ಮಿ ನೋಟ್ 4 : 4100 ಎಂಎಎಚ್ ಬ್ಯಾಟರಿ ಹೊಂದಿರುವ ಈ ಮೊಬೈಲ್ ಮೇಲೆ ಫ್ಲಿಪ್ಕಾರ್ಟ್ ನಲ್ಲಿ ಆಫರ್ ಇದೆ. ಬ್ಯಾಟರಿ ಬ್ಯಾಕಪ್ ಚೆನ್ನಾಗಿರಬೇಕೆಂದು ಬಯಸುವವರು ಇದನ್ನು ಕೊಳ್ಳಬಹುದು. 4 ಜಿಬಿ RAM ಹಾಗೂ ಫಿಂಗರ್ ಪ್ರಿಂಟ್ ಸ್ಕಾನರ್ ಕೂಡ ಇದರಲ್ಲಿದೆ. ಫ್ಲಿಪ್ಕಾರ್ಟ್ ಈ ಮೊಬೈಲ್ ಗೆ 2000 ರೂ. ರಿಯಾಯಿತಿ ನೀಡುತ್ತಿದೆ.

ಹಾನರ್ 6 ಎಕ್ಸ್ : ಫೋಟೋ ಫ್ರೀಕ್ ಗಳಿಗೆ ಇದು ಬೆಸ್ಟ್ ಮೊಬೈಲ್. 12,999 ರೂ. ಮೊತ್ತದ ಈ ಮೊಬೈಲ್ ನಲ್ಲಿ ಡ್ಯೂಯೆಲ್ ಕ್ಯಾಮರಾ, 3,340 ಎಂಎಎಚ್ ಬ್ಯಾಟರಿ, 3ಜಿಬಿ/4ಜಿಬಿ RAM, 32 ಜಿಬಿ/64 ಜಿಬಿ ಸ್ಟೋರೇಜ್ ಸಾಮರ್ಥ್ಯವಿದೆ. 64 ಜಿಬಿ ಮೊಬೈಲ್ ಗೆ 12,999 ರೂ. ಇದ್ರೆ 32 ಜಿಬಿ ಮೊಬೈಲ್ ಗೆ 10,999 ರೂ. ನಿಗದಿ ಮಾಡಲಾಗಿದೆ. ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ಎರಡರಲ್ಲೂ ಇದೇ ಬೆಲೆ ಇದೆ.

ಎಲ್ ಜಿ ಕ್ಯೂ6 : ಫುಲ್ ವಿಷನ್ ಡಿಸ್ ಪ್ಲೇ ಈ ಮೊಬೈಲ್ ನ ವಿಶೇಷತೆ.ಅಮೆಜಾನ್ ನಲ್ಲಿ ಈ ಫೋನ್ 12,990 ರೂ.ಗೆ ಲಭ್ಯವಿದೆ. ಸ್ಕ್ರೀನ್ ಡ್ಯಾಮೇಜ್ ಆದ್ರೆ ನೀವು ವರಿ ಮಾಡಿಕೊಳ್ಳಬೇಕಾಗಿಲ್ಲ. 6 ತಿಂಗಳೊಳಗೆ ಸ್ಕ್ರೀನ್ ಸಮಸ್ಯೆ ಆದ್ರೆ ಅದನ್ನು ಕಂಪನಿಯೇ ಬದಲಾಯಿಸಿಕೊಡುತ್ತದೆ. ಇದರಲ್ಲಿ 4ಜಿ ವೋಲ್ಟ್ ಆಪ್ಷನ್ ಕೂಡ ಲಭ್ಯವಿದೆ.

ಕೂಲ್ ಪ್ಯಾಡ್ ಕೂಲ್ ಪ್ಲೇ 6: ಡ್ಯೂಯೆಲ್ ರೇರ್ ಕ್ಯಾಮರಾ ಹೊಂದಿರೋ ಈ ಮೊಬೈಲ್ ಬೆಲೆ 14,999 ರೂ. 6 ಜಿಬಿ RAM, 4,000 ಎಂಎಎಚ್ ಬ್ಯಾಟರಿ ಈ ಮೊಬೈಲ್ ನ ವಿಶೇಷತೆ. 5.5 ಇಂಚಿನ ಫುಲ್ ಎಚ್ಡಿ ಡಿಸ್ ಪ್ಲೇ ಹೊಂದಿದೆ. ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ ನಲ್ಲಿ ಈ ಸ್ಮಾರ್ಟ್ ಫೋನ್ ಮೇಲೆ ವಿಶೇಷ ಕೊಡುಗೆ ನೀಡಲಾಗಿದೆ.

ಮೋಟೋ ಜಿ5ಎಸ್ ಪ್ಲಸ್ : ಡ್ಯೂಯೆಲ್ 13ಎಂಪಿ ಲೆನ್ಸ್ ಇದರಲ್ಲಿದೆ. ವಿನ್ಯಾಸ, ಕ್ಯಾಮರಾ ಎಲ್ಲವನ್ನೂ ಮೋಟೋರೊಲಾ ಬದಲಾಯಿಸಿದೆ. 4ಜಿಬಿ RAM ಹಾಗೂ 64 ಜಿಬಿ ಸ್ಟೋರೇಜ್ ಹೊಂದಿರೋ ಈ ಫೋನ್ ಬೆಲೆ 15,999 ರೂಪಾಯಿ. ಡ್ಯೂಯೆಲ್ ಕ್ಯಾಮರಾ ಕೂಡ ಇದರಲ್ಲಿದೆ.

ಲೆನೊವೋ ಕೆ8 ನೋಟ್: ಇದು ಮಿಡ್ ರೇಂಜ್ ಸ್ಮಾರ್ಟ್ ಫೋನ್. 3ಜಿಬಿ RAM, 32ಜಿಬಿ ಸ್ಟೋರೇಜ್ ಹೊಂದಿರೋ ಮೊಬೈಲ್ ಗೆ 12,999 ರೂಪಾಯಿ ಹಾಗೂ 4 ಜಿಬಿ RAM, 64 ಜಿಬಿ ಸ್ಟೋರೇಜ್ ಹೊಂದಿರೋ ಸ್ಮಾರ್ಟ್ ಫೋನ್ ಗೆ 13,999 ರೂಪಾಯಿ ನಿಗದಿಪಡಿಸಲಾಗಿದೆ. ಅಮೆಜಾನ್ ನಲ್ಲಿ 2000 ರೂ.ವರೆಗೂ ಡಿಸ್ಕೌಂಟ್ ಇದೆ.

ಕ್ಸಿಯೋಮಿ ಎಂಐ ಎ1 : ಗೂಗಲ್ ಆ್ಯಂಡ್ರಾಯ್ಡ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಈ ಮೊಬೈಲ್ ತಯಾರಿಸಲಾಗಿದೆ. ಈ ಫೋನ್ ನಲ್ಲಿ ವರ್ಷಾಂತ್ಯಕ್ಕೆ ಓರಿಯೋ ಅಪ್ಡೇಟ್ ನೀಡುವುದಾಗಿ ಕಂಪನಿ ಹೇಳಿದೆ. ಕ್ಸಿಯೋಮಿಯ ಈ ಲೇಟೆಸ್ಟ್ ಫೋನ್ ಬೆಲೆ 14,999 ರೂ. ಫ್ಲಿಪ್ಕಾರ್ಟ್ ನಲ್ಲಿ ಈ ಸ್ಮಾರ್ಟ್ ಫೋನ್ ಗೆ ಎಕ್ಸ್ ಚೇಂಜ್ ಆಫರ್ ಕೂಡ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...