alex Certify
ಕನ್ನಡ ದುನಿಯಾ       Mobile App
       

Kannada Duniya

ಡ್ರಾಯಿಂಗ್ ನಲ್ಲಿ ಆಸಕ್ತಿಯಿದ್ದರೆ ನೀವೂ ಶುರು ಮಾಡಿ ಈ ಕೆಲಸ

ವೃತ್ತಿ ಆಯ್ಕೆ ಸುಲಭದ ಕೆಲಸವಲ್ಲ. ಮನಸ್ಸಿಲ್ಲದ ಮನಸ್ಸಿನಲ್ಲಿ ಸಿಕ್ಕ ವೃತ್ತಿಯನ್ನು ಮಾಡುವ ಅನಿವಾರ್ಯತೆ ಎದುರಾಗುತ್ತದೆ. ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದು, ಸೃಜನಶೀಲ ವ್ಯಕ್ತಿಗಳು ನೀವಾಗಿದ್ದರೆ ನೌಕರಿಗೆ ಕಾಯಬೇಡಿ. ನಿಮ್ಮ ಪ್ರತಿಭೆ ತೋರಿಸಲು ಸುವರ್ಣಾವಕಾಶಗಳು ಇಲ್ಲಿವೆ.

3 ಡಿ ಮುದ್ರಕ ಕಲಾವಿದ : ಇದು ವೃತ್ತಿಜೀವನದ ಉತ್ತಮ ಭವಿಷ್ಯಕ್ಕೆ ಒಳ್ಳೆಯದು. ಕಂಪ್ಯೂಟರ್ ಜ್ಞಾನ (ಸಿಎಡಿ) ಹೊಂದಿರಬೇಕು. ತಂತ್ರಜ್ಞಾನ ಹಾಗೂ ನಿಮ್ಮ ಸೃಜನಶೀಲತೆ ಸಹಾಯದಿಂದ ನೀವು ನಿಮ್ಮದೆ ಡಿಸೈನ್ ಸಿದ್ಧಪಡಿಸಬಹುದಾಗಿದೆ. ನಿಮ್ಮ ಡಿಸೈನ್, ವಿನ್ಯಾಸಗಳನ್ನು ಆನ್ಲೈನ್ ಮಾರುಕಟ್ಟೆಯಲ್ಲಿ ಒಳ್ಳೆ ಬೆಲೆಗೆ ಮಾರಾಟ ಮಾಡಬಹುದಾಗಿದೆ.

ಶಿಕ್ಷಕ : ನೀವು ಒಬ್ಬ ಕಲಾವಿದರಾಗಿದ್ದು ನಿಮ್ಮ ಕಲೆಯನ್ನು ಕಲಿಸುವ ಆಸಕ್ತಿಯಿದ್ದರೆ ನೀವು ಶಿಕ್ಷಕರಾಗಿ ಕೆಲಸ ಮಾಡಬಹುದು. ಕೋಚಿಂಗ್ ಸೆಂಟರ್ ಮೂಲಕ ಅಥವಾ ಯುಟ್ಯೂಬ್ ಮೂಲಕ ನಿಮ್ಮ ಕಲೆಯನ್ನು ನೀವು ಬೆರೆಯವರಿಗೆ ಕಲಿಸಿ ಹಣ ಮಾಡಬಹುದಾಗಿದೆ.

ವ್ಯಂಗ್ಯಚಿತ್ರಕಾರ : ಇತ್ತೀಚಿನ ದಿನಗಳಲ್ಲಿ ವ್ಯಂಗ್ಯಚಿತ್ರಕ್ಕೆ ಹೆಚ್ಚಿನ ಬೇಡಿಕೆಯಿದೆ. ನೀವು ಸೃಜನಶೀಲರಾಗಿದ್ದು, ನಿಮ್ಮ ಆಲೋಚನೆ, ಚಿಂತನೆಗಳನ್ನು ವ್ಯಂಗ್ಯಚಿತ್ರದ ಮೂಲಕ ಹೇಳ ಬಯಸಿದ್ದರೆ ಇದು ನಿಮಗೆ ಒಳ್ಳೇ ವೇದಿಕೆ.

ಗ್ರಾಫಿಕ್ ಡಿಸೈನರ್ : ಜಾಹಿರಾತು ಕ್ಷೇತ್ರದಲ್ಲಿ ಗ್ರಾಫಿಕ್ ಡಿಸೈನರ್ ಗಳಿಗೆ ಹೆಚ್ಚಿನ ಬೇಡಿಕೆಯಿದೆ. ಗ್ರಾಫಿಕ್ ಡಿಸೈನ್ ಬಗ್ಗೆ ಜ್ಞಾನ ಹೊಂದಿದ್ದರೆ ನೀವು ವೃತ್ತಿ ಶುರು ಮಾಡಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...