alex Certify
ಕನ್ನಡ ದುನಿಯಾ       Mobile App
       

Kannada Duniya

ಫೋನ್ ನಲ್ಲಿ ಸದಾ ಇರಲಿ ಈ ಆ್ಯಪ್ಸ್

ಕಷ್ಟದ ಸಮಯದಲ್ಲಿ ಸ್ಮಾರ್ಟ್ಫೋನ್ ನಲ್ಲಿರುವ ಆ್ಯಪ್ ನಮ್ಮ ಸಹಾಯಕ್ಕೆ ಬರುತ್ತೆ. ಇದ್ರ ನೆರವಿನಿಂದ ನಮ್ಮ ಅನೇಕ ಕಷ್ಟಗಳು ದೂರವಾಗುತ್ತವೆ. ಹಾಗಾಗಿ ಕಷ್ಟದ ಸಂದರ್ಭದಲ್ಲಿ ನೆರವಾಗುವ ಕೆಲವೊಂದು ಆ್ಯಪ್ ನಮ್ಮ ಸ್ಮಾರ್ಟ್ಫೋನ್ ನಲ್ಲಿದ್ದರೆ ಬೆಸ್ಟ್.

AppLock : ನಮ್ಮ ಕಿಸೆಯಲ್ಲಿರುವ ಸಣ್ಣ ಮೊಬೈಲ್ ನಲ್ಲಿ ನಮ್ಮ ವೈಯಕ್ತಿಕ ಮಾಹಿತಿಗಳು ಸಾಕಷ್ಟಿರುತ್ತವೆ. ಇದು ಬೇರೆಯವರ ಕೈಗೆ ಸಿಕ್ಕಲ್ಲಿ ಸಮಸ್ಯೆಯಾಗುತ್ತದೆ. ಹಾಗಾಗಿ ನಿಮ್ಮ ಮೊಬೈಲ್ ಗೆ AppLock ನಂತ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಪೋನ್ ನಲ್ಲಿರುವ ಮಾಹಿತಿಯನ್ನು ಸುರಕ್ಷಿತವಾಗಿಟ್ಟುಕೊಳ್ಳಿ.

CamScanner :ಕೆಲವೊಂದು ದಾಖಲೆಗಳನ್ನು ಆತುರದಲ್ಲಿ ಬೇರೆಯವರಿಗೆ ಕಳುಹಿಸಬೇಕಾಗುತ್ತದೆ. ದಾಖಲೆ ಕಳುಹಿಸಲು ಕಂಪ್ಯೂಟರ್ ಹುಡುಕುತ್ತ, ಸೈಬರ್ ಗೆ ಅಲೆಯಲು ಆಗುವುದಿಲ್ಲ. ಹಾಗಾಗಿ CamScanner ಆ್ಯಪ್ ಸದಾ ನಿಮ್ಮ ಬಳಿಯಿರಲಿ. ಈ ಆ್ಯಪ್ ನಲ್ಲಿ ನೀವು ದಾಖಲೆಗಳನ್ನು ಸ್ಕ್ಯಾನ್ ಮಾಡಿ ನೇರವಾಗಿ ಮೊಬೈಲ್ ನಲ್ಲಿಯೇ ಕಳುಹಿಸಬಹುದು.

CamScanner: ಫೋಟೋದಿಂದ ಹಿಡಿದು, ಹಾಡು, ವಿಡಿಯೋ ಹೀಗೆ ಅನೇಕ ಮಾಹಿತಿಗಳನ್ನು ನಾವು ಬೇರೆಯವರಿಗೆ ಕಳುಹಿಸುತ್ತೇವೆ. ಎಲ್ಲ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಮಾದ್ಯಮಗಳ ಮೂಲಕ ರವಾನೆ ಮಾಡುವುದು ಸೂಕ್ತವಲ್ಲ. ನಿಮ್ಮ ಬಳಿ ಶೇರ್ ಹಿಟ್ ನಂತಹ ಅಪ್ಲಿಕೇಷನ್ ಇದ್ದಲ್ಲಿ ಸೆಕೆಂಡ್ ನಲ್ಲಿ ನಿಮ್ಮ ವಿಡಿಯೋ, ಫೋಟೋವನ್ನು ಆಪ್ತರಿಗೆ ಕಳುಹಿಸಬಹುದು.

Taxi App : ವೋಲಾ, ಉಬರ್ ನಂತಹ ಟ್ಯಾಕ್ಸಿಗಳ ಆ್ಯಪ್ ನಿಮ್ಮ ಬಳಿ ಇರುವುದು ಸೂಕ್ತ. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸರಿಯಾಗಿಲ್ಲದ ಸ್ಥಳಗಳಲ್ಲಿ ಆಪತ್ ಕಾಲದಲ್ಲಿ ಈ ಟ್ಯಾಕ್ಸಿಗಳು ನಿಮ್ಮ ನೆರವಿಗೆ ಬರುತ್ವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...