alex Certify
ಕನ್ನಡ ದುನಿಯಾ       Mobile App
       

Kannada Duniya

ಬೀನ್ಸ್ ಬೆಲೆ ಕೇಳಿ ಬೆಚ್ಚಿ ಬೀಳ್ತಿದ್ದಾರೆ ಗೃಹಿಣಿಯರು..!

beans-625_625x350_71439535911

ಈಗ ತರಕಾರಿ ಮುಟ್ಟಿದ್ರೆ ಕೈಸುಡುತ್ತೆ. ಬೆಂಗಳೂರಲ್ಲಿ ತರಕಾರಿ ಬೆಲೆ ಗಗನಕ್ಕೇರಿದೆ. ಕಳೆದ ವಾರ ಸುರಿದ ಅಕಾಲಿಕ ಮಳೆಯಿಂದಾಗಿ ಉತ್ತರ ಕರ್ನಾಟಕದಲ್ಲಿ ಬೆಳೆಗಳಿಗೆ ಹಾನಿಯಾಗಿದೆ. ಪರಿಣಾಮ ಬೆಂಗಳೂರಲ್ಲಿ ತರಕಾರಿ ಬೆಲೆ ದಿಢೀರನೆ ಏರಿಕೆಯಾಗಿದೆ.

ಕಳೆದ 2 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಒಂದು ಕೆಜಿ ಬೀನ್ಸ್ ಬೆಲೆ 100 ರೂಪಾಯಿ ದಾಟಿದೆ. ಸಾಮಾನ್ಯವಾಗಿ ಅಡುಗೆಗೆ ಎಲ್ಲರೂ ಬೀನ್ಸ್ ಬಳಸ್ತಾರೆ. ಹೋಟೆಲ್ ಗಳಿಗಂತೂ ಅದು ಬೇಕೇ ಬೇಕು. ಆದ್ರೆ ಪೂರೈಕೆ ಕಡಿಮೆಯಾಗಿರೋದ್ರಿಂದ ಬೆಲೆ ಜಾಸ್ತಿಯಾಗಿದೆ.

ಟೊಮೆಟೋ, ಆಲೂಗಡ್ಡೆ, ಹಸಿಮೆಣಸಿನ ಬೆಲೆ ಕೂಡ ದಿನೇ ದಿನೇ ಜಾಸ್ತಿಯಾಗ್ತಾ ಇರೋದು ಮಹಿಳೆಯರಿಗೆ ಆತಂಕ ಮೂಡಿಸಿದೆ. ಮತ್ತೆ ಅಕಾಲಿಕ ಮಳೆ ಕಾಟ ಕೊಟ್ರೆ ತರಕಾರಿ ಬೆಲೆ ಇನ್ನೂ ಜಾಸ್ತಿಯಾಗಲಿದೆ ಅಂತಾರೆ ವ್ಯಾಪಾರಿಗಳು. ಆದ್ರೆ ಮೇ ಮತ್ತು ಜೂನ್ ಮದುವೆ ಸೀಸನ್ ಆಗಿರೋದ್ರಿಂದ ಆಗ ತರಕಾರಿ ಬೆಲೆ ಕೊಂಚ ಕಡಿಮೆಯಾಗಲಿದೆ ಅನ್ನೋದು ವ್ಯಾಪಾರಿಗಳ ಲೆಕ್ಕಾಚಾರ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...