alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಲಿಕಾನ್ ಸಿಟಿ ಬೆಂಗಳೂರು ಮುಡಿಗೆ ಮತ್ತೊಂದು ಗರಿ

ಈಗಾಗಲೇ ಹಲವು ಹಿರಿಮೆಗಳಿಗೆ ಪಾತ್ರವಾಗಿರುವ ರಾಜ್ಯ ರಾಜಧಾನಿ ಬೆಂಗಳೂರು ನಗರದ ಮುಡಿಗೆ ಮತ್ತೊಂದು ಗರಿ ಏರಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯೋಗಗಳನ್ನು ಒದಗಿಸುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಪ್ರಥಮ ಸ್ಥಾನದಲ್ಲಿದೆ.

ಉದ್ಯೋಗ ಅವಕಾಶಗಳ ಮಾಹಿತಿ ನೀಡುವ ‘ಇಂಡೀಡ್’ ಅಂತರ್ಜಾಲ ತಾಣ ಈ ಕುರಿತು ಮಾಹಿತಿ ನೀಡಿದ್ದು, ಐಟಿ ಕ್ಷೇತ್ರಗಳಲ್ಲಿನ ಉದ್ಯೋಗಾವಕಾಶಗಳ ಶೇಕಡಾ 22 ರಷ್ಟು ಪ್ರಮಾಣ ಬೆಂಗಳೂರಿನಲ್ಲಿದ್ದರೆ ನಂತರದ ಸ್ಥಾನದಲ್ಲಿರುವ ದೆಹಲಿ- ಎನ್ ಸಿ ಆರ್ ಶೇಕಡ 11ರ ಪ್ರಮಾಣವನ್ನು ಹೊಂದಿದೆ.

ಶೇಕಡಾ 10 ಉದ್ಯೋಗ ಅವಕಾಶ ಪ್ರಮಾಣದೊಂದಿಗೆ ಪುಣೆ ಮೂರನೇ ಸ್ಥಾನದಲ್ಲಿದ್ದರೆ, ಶೇಕಡಾ 9 ಪ್ರಮಾಣದೊಂದಿಗೆ ಹೈದರಾಬಾದ್ ನಾಲ್ಕನೇ ಸ್ಥಾನದಲ್ಲಿದೆ. ಮುಂಬೈ ಶೇಕಡಾ 8, ಚೆನ್ನೈ ಶೇಕಡಾ 7, ಮೊಹಾಲಿ ಶೇಕಡಾ 4 ಹಾಗೂ ಅಹ್ಮದಾಬಾದ್ ಶೇಕಡಾ 3 ಪ್ರಮಾಣದೊಂದಿಗೆ ನಂತರದ ಸ್ಥಾನದಲ್ಲಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...