alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಂಗಳೂರಲ್ಲಿ ಶುರುವಾಯ್ತು ಬಿಟ್ ಕಾಯಿನ್ ಕಿಯೋಸ್ಕ್

ಆರ್ಬಿಐ ಮತ್ತು ಹಣಕಾಸು ಸಚಿವರ ಎಚ್ಚರಿಕೆಯ ನಡುವೆಯೂ ರಾಜಾಜಿನಗರದಲ್ಲಿರುವ ಯುನೋಕಾಯಿನ್ ಟೆಕ್ನಾಲಜೀಸ್ ಡಿಜಿಟಲ್ ರೂಪದ ಹಣ ಬಿಟ್ಕಾಯಿನ್ ಎಟಿಎಂ ಅನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದೆ.

ದೇಶದ ಮೊದಲ ಬಿಟ್ ಕಾಯಿನ್ ಎಟಿಎಂ ಕಿಯೋಸ್ಕ್ ಈಗ ಬೆಂಗಳೂರಿನಲ್ಲಿ ಶುರುವಾಗಿದೆ. ಮುಂದಿನ ದಿನಗಳಲ್ಲಿ ದೆಹಲಿ, ಮುಂಬೈಗಳಲ್ಲಿ ಕಿಯೋಸ್ಕ್ ಆರಂಭಿಸಲಾಗುವುದು ಎಂದು ಯುನೋಕಾಯಿನ್ ತನ್ನ ವೆಬ್ ಸೈಟ್ ನ ಪ್ರಕಟಣೆಯಲ್ಲಿ ತಿಳಿಸಿದೆ.

ಇದರಲ್ಲಿ ಇಂಡಿಯನ್ ಕರೆನ್ಸಿ ಡೆಪಾಸಿಟ್ ಹಾಗೂ ವಿತ್ ಡ್ರಾ ಮಾಡಿಕೊಳ್ಳಲು ಹೊಸ ಬಗೆಯ ವ್ಯವಸ್ಥೆಯನ್ನು ಆರಂಭಿಸಲಾಗಿದೆಯಂತೆ. ಕಿಯೋಸ್ಕ್ ಮೂಲಕ ಯುನೋಕಾಯಿನ್ ಮತ್ತು ಯುನೋಡೆಕ್ಸ್ ಗ್ರಾಹಕರು ಹಣವನ್ನು ಡೆಪಾಸಿಟ್ ಹಾಗೂ ವಿತ್ ಡ್ರಾ ಮಾಡಿಕೊಳ್ಳಬಹುದು. ಇದರಲ್ಲಿ ಕನಿಷ್ಠ ಡೆಪಾಸಿಟ್ ಮತ್ತು ವಿತ್ ಡ್ರಾ ಮೊತ್ತ 1 ಸಾವಿರ ರೂ.

ಇನ್ನು ಈ ಕಿಯೋಸ್ಕ್ ನಲ್ಲಿ ಮನವಿಯ ನಂತರ ಒಟಿಪಿಯನ್ನು ನಮೂದಿಸಿ ಯುನೋಕಾಯಿನ್ ಅಥವಾ ಯುನೋಡಕ್ಸ್ ಖಾತೆಗೆ ಜಮಾ ಮಾಡಬಹುದಂತೆ. ನಂತರ ಡೆಪಾಸಿಟ್ ಆಧಾರದ ಮೇಲೆ ಬಿಟ್ ಕಾಯಿನ್ ತೆಗೆದುಕೊಳ್ಳಬಹುದಂತೆ. ಇನ್ನು ಹಣವನ್ನು ಮೊಬೈಲ್ ಆ್ಯಪ್ ಅಥವಾ ವೆಬ್ ಸೈಟ್ ಮೂಲಕ ಕೋರಿಕೆ ಸಲ್ಲಿಸಿ ಆಮೇಲೆ ದೊರಕುವ 12 ಅಂಕೆಗಳನ್ನು ಬಳಸಿ ಇಂಡಿಯನ್ ಕರೆನ್ಸಿಯನ್ನು ತೆಗೆಯಬಹುದಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...