alex Certify
ಕನ್ನಡ ದುನಿಯಾ       Mobile App
       

Kannada Duniya

ಬೇನಾಮಿ ಆಸ್ತಿ ಹೊಂದಿದವರಿಗೆ ತಟ್ಟಲಿದೆ ಐಟಿ ಬಿಸಿ

ಬೇನಾಮಿ ಆಸ್ತಿ ಪತ್ತೆಗಾಗಿ ಆದಾಯ ತೆರಿಗೆ ಇಲಾಖೆ 24 ವಿಭಾಗಗಳನ್ನು ತೆರೆದಿದ್ದು, ವಿವಿಧ ಮೂಲಗಳಿಂದ ಇಂತಹ ಆಸ್ತಿಗಳ ಮಾಹಿತಿ ಕಲೆ ಹಾಕಲಾಗುತ್ತಿದೆಯಲ್ಲದೇ 30 ಲಕ್ಷ ರೂ. ಗಳಿಗೂ ಅಧಿಕ ಬೆಲೆಯ ಆಸ್ತಿಗಳ ನೋಂದಣಿಯನ್ನು ಪರಿಶೀಲನೆಗೆ ಒಳಪಡಿಸಲಿದೆ.

ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ಮುಖ್ಯಸ್ಥ ಸುಶೀಲ್ ಚಂದ್ರ ಈ ಕುರಿತು ಮಾಹಿತಿ ನೀಡಿದ್ದು, ಬೇನಾಮಿ ಆಸ್ತಿಗಳ ಪ್ರಕರಣವನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ ಎಂದಿದ್ದಾರೆ. ಮಾನ್ಯತೆ ಕಳೆದುಕೊಂಡಿರುವ ನಕಲಿ ಕಂಪನಿ ಹಾಗೂ ಅದರ ನಿರ್ದೇಶಕರುಗಳ ಆಸ್ತಿಪಾಸ್ತಿ ಕುರಿತು ತನಿಖೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಬೇನಾಮಿ ಆಸ್ತಿಗೆ ಸಂಬಂಧಿಸಿದಂತೆ ಇದುವರೆಗೆ 621 ಪ್ರಕರಣಗಳು ದಾಖಲಾಗಿದ್ದು, ಹೊಸ ಕಾನೂನಿನ ಪ್ರಕಾರ ಬೇನಾಮಿ ಆಸ್ತಿ ಹೊಂದಿದವರಿಗೆ 7 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಅವಕಾಶವಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...