alex Certify
ಕನ್ನಡ ದುನಿಯಾ       Mobile App
       

Kannada Duniya

ಗುಡ್ ನ್ಯೂಸ್! ‘ಪತಂಜಲಿ’ ಗ್ರಾಹಕರಿಗೆ ಸಿಗಲಿದೆ ‘ವಿಮೆ’ ಸೌಲಭ್ಯ….

ಬಳ್ಳಾರಿ: ಈಗಾಗಲೇ ದಿಗ್ಗಜ ಕಂಪನಿಗಳಿಗೆಲ್ಲಾ ಪೈಪೋಟಿ ನೀಡಿರುವ ಪತಂಜಲಿ ಉತ್ಪನ್ನಗಳು, ಹೆಚ್ಚಿನ ಗ್ರಾಹಕರನ್ನು ಸೆಳೆದಿವೆ. ವಹಿವಾಟಿನಲ್ಲಿಯೂ ‘ಪತಂಜಲಿ’ ಗಮನಾರ್ಹ ಸಾಧನೆ ಮಾಡಿದೆ.

ಇದೇ ವೇಳೆ ಪತಂಜಲಿ ಉತ್ಪನ್ನಗಳನ್ನು ಖರೀದಿಸುವ ಗ್ರಾಹಕರಿಗೆ ವಿಶೇಷ ಸೌಲಭ್ಯವನ್ನು ನೀಡಲು ಬಾಬಾ ರಾಮ್ ದೇವ್ ಮುಂದಾಗಿದ್ದಾರೆ.

ಬಳ್ಳಾರಿಯಲ್ಲಿ ಆಯೋಜಿಸಿರುವ ಯೋಗ ಶಿಬಿರದಲ್ಲಿ ಪಾಲ್ಗೊಂಡಿದ್ದ ಅವರು, ಬಳ್ಳಾರಿಯ ಪತಂಜಲಿ ಸ್ಟೋರ್ ಗೆ ಭೇಟಿ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಪತಂಜಲಿ ಸ್ಟೋರ್ ಗಳಲ್ಲಿ 500 ರೂ. ಗಿಂತ ಹೆಚ್ಚಿನ ಮೊತ್ತದ ಉತ್ಪನ್ನಗಳನ್ನು ಖರೀದಿಸಿದ ಗ್ರಾಹಕರಿಗೆ ಲೋಯಾಲ್ಟಿ ಕಾರ್ಡ್ ನೀಡಲಾಗುವುದು. ಅಪಘಾತದಲ್ಲಿ ಮೃತಪಟ್ಟವರಿಗೆ 5 ಲಕ್ಷ ರೂ., ಅಂಗವೈಕಲ್ಯರಾದಲ್ಲಿ 2.50 ಲಕ್ಷ ರೂ. ವಿಮೆ ಸೌಲಭ್ಯ ನೀಡಲಾಗುವುದು ಎಂದು ಹೇಳಿದ್ದಾರೆ.

ವಿಮೆ ಸೌಲಭ್ಯ ನೀಡುವ ಯೋಜನೆ ಶೀಘ್ರವೇ ಜಾರಿಗೆ ಬರಲಿದೆ. ದೇಶದಲ್ಲಿನ ಎಲ್ಲಾ ಪತಂಜಲಿ ಸ್ಟೋರ್ ಗಳಲ್ಲಿ ಗ್ರಾಹಕರು ಕಾರ್ಡ್ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...